ಕೂಗು ನಿಮ್ಮದು ಧ್ವನಿ ನಮ್ಮದು

ದೇವಿ ವೇಷದಲ್ಲಿ ಕಾಣಿಸಿಕೊಂಡ ನಟಿ ಸಂಜನಾ ಗಲ್ರಾನಿ

ಬೆಂಗಳೂರು: ಒಲಾ ಕ್ಯಾಬ್ ಚಾಲಕನ ಜೊತೆ ಕಿರಿಕ್ ಮಾಡಿ ಸುದ್ದಿಯಾಗಿದ್ದ ಸ್ಯಾಂಡಲ್‍ವುಡ್ ನಟಿ ಸಂಜನಾ ಇದೀಗ ದೇವಿ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. ಇವತ್ತಿನಿಂದ ದೇಶಾದ್ಯಂತ ನವರಾತ್ರಿ ಪ್ರಾರಂಭವಾಗಿದ್ದು, ಜನ ನವರಾತ್ರಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಪ್ರಾರಂಭಿಸಿದ್ದಾರೆ. ಇದರ ಮಧ್ಯೆ ಗಂಡ ಹೆಂಡತಿ ಮೂವಿ ಖ್ಯಾತಿಯ ನಟಿ ಸಂಜನಾ ಸದಾ ಮಾಡ್ರೆನ್ ಡ್ರೆಸ್ ತೊಟ್ಟು ಸಖತ್ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ರು.

ಆದ್ರೆ ಇದೀಗ ಸಂಜನಾ ಇದ್ದಕ್ಕಿದ್ದಂತೆ ದೇವಿ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೀಡಿಯೋ ಸಂಜನಾ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಾಕಿಕೊಂಡಿದ್ದಾರೆ. ವೀಡಿಯೋದಲ್ಲಿ ಸಂಜನಾ ಕೆಂಪು ಬಣ್ಣದ ಸೀರೆ, ಆಭರಣಗಳನ್ನು ಹಾಕಿಕೊಂಡು, ಕೈಯಲ್ಲಿ ಕಮಲ, ತ್ರಿಶೂಲ ಹಿಡಿದು, ಕಿರೀಟ ತೊಟ್ಟು, ದೇವಿಯಂತೆ ಕಾಣಿಸಿಕೊಂಡಿದ್ದಾರೆ. ವೀಡಿಯೋವನ್ನು ಅತ್ಯಂತ ಪ್ರತಿಭಾವಂತ ತಂಡ ಶೂಟ್ ಮಾಡಿದ್ದಾರೆ ಎಂದು ಕ್ಯಾಪ್ಷನ್ ಬರೆದು ಕೊಂಡಿದ್ದಾರೆ.

error: Content is protected !!