ಕೂಗು ನಿಮ್ಮದು ಧ್ವನಿ ನಮ್ಮದು

ಅಂದು ಬ್ರಿಟಿಷರ ಬಂಧನಲ್ಲಿ: ಇಂದು ಪೊಲೀಸರ ಬಂಧನದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ..!?

ಬೆಳಗಾವಿ: ಅಂದು ಬ್ರಿಟಿಷರ ಬಂಧನದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಇಂದು ಪೊಲೀಸರ ಬಂಧನದಲ್ಲಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ..!? ಹೌದು.. ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಬೆಳಗಾವಿ ಜಿಲ್ಲೆಗೆ ಕೀರ್ತಿ. ಅಂದ ಹಾಗೆ ಬೆಳಗಾವಿ ಜಿಲ್ಲೆಯ ಹಲವೆಡೆ ಈಗಾಗಲೇ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಗಳನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ. ಹೀಗೆ ಪೂಜೆಗೆ ಪಾತ್ರವಾಗಬೇಕಿದ್ದ ಸಂಗೊಳ್ಳಿ ರಾಯಣ್ಣನ ಮೂರ್ತಿಗಳು ಇದೀಗ ಬೆಳಗಾವಿಯ ಕಾಕತಿ ಪೊಲೀಸ್ ಠಾಣೆಯ ಗೋಡಾವದಲ್ಲಿ ಧೂಳು ತಿನ್ನುತ್ತಿವೆ.

ಧೂಳು ಹಿಡಿದ ಸಂಗೊಳ್ಳಿ ರಾಯಣ್ಣನ ಮೂರ್ತಿಯ ದೃಶ್ಯಾವಳಿ

ಕಳೆದ ವರ್ಷ ಬೆಳಗಾವಿ ತಾಲೂಕಿನ ಪೀರನವಾಡಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ರು. ಆಗ ಇಡೀ ರಾಜ್ಯ ಸರ್ಕಾರವೇ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಭಕ್ತರ ಹೋರಾಟಕ್ಕೆ ಮಂಡಿಯೂರಿತ್ತು. ಆ ಬಳಿಕ ಬೆಳಗಾವಿಯ ಶಾಹು ನಗರದಲ್ಲಿ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾನಗೆ ಸಿದ್ಧತೆ ನಡೆಸಲಾಗಿತ್ತು. ಆಗ ಪೊಲೀಸರಿಂದ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಸಿಗದ ಕಾರಣ ಕಾಕತಿಯಲ್ಲಿನ ಮೂರ್ತಿಕಾರನ ಬಳಿಯೇ ರಾಯಣ್ಣನ ಮೂರ್ತಿಗಳು ಇದ್ದವು. ನಂತರ ಕಾಕತಿ ಪೊಲೀಸರು ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಗಳನ್ನ ವಶಕ್ಕೆ ಪಡೆದಿದ್ದರು.

ಪೊಲೀಸ್ ಠಾಣೆಯ ಗೋಡಾವದಲ್ಲಿ ಸಂಗೊಳ್ಳಿ ರಾಯಣ್ಣ

ಅಂದಿನಿಂದ ಇಂದಿನವರೆಗೆ ಸಂಗೊಳ್ಳಿ ರಾಯಣ್ಣನ ಮೂರ್ತಿಗಳು ಪೊಲೀಸ್ ಠಾಣೆಯ ಗೋಡಾವದಲ್ಲಿ ಧೂಳು ತಿನ್ನುತ್ತಿವೆ. ಅಲ್ಲದೇ ಸ್ವಾತಂತ್ರ್ಯೋವದ ದಿನವಾದ
ಆಗಷ್ಟ್ 15 ರಂದು ಸಂಗೊಳ್ಳಿ ರಾಯಣ್ಣನ ಜನ್ಮದಿನ. ಹೀಗಾಗಿ ಸ್ವಾತಂತ್ರ್ಯ ಹೋರಾಟಗಾರನ ಮೂರ್ತಿಗಳನ್ನ ಪೊಲೀಸ್ ಠಾಣೆಯಲ್ಲಿ ಇಟ್ಟು ಅವಮಾನಿಸದೇ, ತಮ್ಮ ವಶದಲ್ಲಿ ಇಟ್ಟುಕೊಂಡಿರುವ ರಾಯಣ್ಣನ ಮೂರ್ತಿ ಮರಳಿ ಕೊಡುವಂತೆ ಹೋರಾಟಗಾರರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಮನವಿಯ ಬಳಿಕವೂ ರಾಯಣ್ಣ ಮೂರ್ತಿ ಮರಳಿ ನೀಡದಿದ್ದರೇ ಉಗ್ರ ಹೋರಾಟ ಮಾಡುವುದಾಗಿ ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.

ಒಟ್ಟಾರೆ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಗಳು ಪೂಜಿಸಲ್ಪಡುವ ಬದಲು ಪೊಲೀಸರ ಬಂಧನದಲ್ಲಿ ಧೂಳು ತಿನ್ನುತ್ತಿರುವುದು ವಿಪರ್ಯಾಸವೇ ಸರಿ. ಇನ್ನಾದರೂ ರಾಜ್ಯ ಸರ್ಕಾರ ಈ ವಿಚಾರದಲ್ಲಿ ನಿರ್ಲಕ್ಷಿಸದೇ, ಹೋರಾಟಗಾರರ ಹೋರಾಟಕ್ಕೆ ಅವಕಾಶ ಕೊಡದೇ, ಧೂಳು ಹೀಡಿದ ರಾಯಣ್ಣನ ಮೂರ್ತಿಗಳಿಗೆ ಬಿಡುಗಡೆಯ ಭಾಗ್ಯ ಕರುಣಿಸಬೇಕಿದೆ.

error: Content is protected !!