ಬೆಂಗಳೂರು:ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣಾ ಅವರ ಸಹೋದರಿ ಎಸ್.ಎಂ ಸುನಿತಾ ಮನೆ ಮೇಲೆ ಆದಾಯ ತೆರಿಗೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಸುಮಾರು ಎಂಟು ಅಧಿಕಾರಿಗಳು ದಾಳಿ ನಡೆಸಿ ಮನೆಯನ್ನು ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ. ಕೋರಮಂಗಲದ ಫಸ್ಟ್ ಬ್ಲಾಕ್ ನಲ್ಲಿರುವ ಅವರ ಬಾಗ್ಮನೆ ಎನ್ನುವ ನಿವಾಸ ಮತ್ತು ಬಿಲ್ಡರ್ ಕಚೇರಿ ಮಳೆ ದಾಳಿ ನಡೆಸಿದ್ದಾರೆ.
ಇದರ ಜೊತೆಗೆ ಟ್ರಾನ್ ಇನ್ಸೈನಿಯಾ ಅಪಾರ್ಟ್ಮೆಂಟ್ ಮೇಲೆಯೂ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಕಳೆದ ಎರಡು ದಿನಗಳಿಂದ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.