ಕೂಗು ನಿಮ್ಮದು ಧ್ವನಿ ನಮ್ಮದು

RSS ಸದಸ್ಯನಾಗಿದ್ದ ಡಿಕೆಶಿಯವರೇ ಸಿದ್ದರಾಮಯ್ಯನವರ ಮಾತನ್ನು ಒಪ್ಪುತ್ತೀರಾ, BJP ಪ್ರಶ್ನೆ

ಬೆಂಗಳೂರು: ತಾಲಿಬಾನ್ ಎನ್ನುವ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಡಿಕೆಶಿ ಅವರ ಹೇಳಿಕೆಯನ್ನು ಉಲ್ಲೇಖಿಸಿ BJP ಈಗ ತಿರುಗೇಟು ನೀಡಿದೆ. ನಾನು RSS ಸದಸ್ಯನಾಗಿದ್ದ ಡಿಕೆಶಿಯವರೇ ಸಿದ್ದರಾಮಯ್ಯನವರ ಮಾತನ್ನು ಒಪ್ಪುತ್ತೀರಾ BJP ಪ್ರಶ್ನೆ ಶಾಖೆಯ ಸದಸ್ಯನಾಗಿದ್ದೆ.

ನಮಸ್ತೇ ಸದಾ ವತ್ಸಲೆ ಗೀತೆಯನ್ನೂ ಹಾಡಿದ್ದೆ ಎಂದು ಡಿಕೆಶಿ ಹೇಳಿದ್ರು. ಅದು ನಿಮ್ಮ ಹೇಳಿಕೆ ಅಲ್ಲವೇ? ಈಗ ನಿಮ್ಮ ಪಟಾಲಂಗಳ ಬಾಯಿಯಿಂದ ಹೊರಡುತ್ತಿರುವ ಮಾತುಗಳನ್ನು ನೀವು ಒಪ್ಪಿಕೊಳ್ಳುವಿರಾ? ನಿಮ್ಮನ್ನು ಅಡಕತ್ತರಿಯಲ್ಲಿ ಸಿಲುಕಿಸುವ ಹುನ್ನಾರವಿದು ಎಂದಿದೆ.

ವಿಪಕ್ಷ ನಾಯಕ ಸಿದ್ದರಾಮಯ್ಯ ತಾಲಿಬಾನ್ ಹೇಳಿಕೆಯನ್ನು ಕಾಂಗ್ರೆಸ್ ಒಪ್ಪುತ್ತದೆಯೇ? KPCC ಅಧ್ಯಕ್ಷರಾಗಿ ಈ ಹೇಳಿಕೆಯನ್ನು ದೃಢೀಕರಿಸುತ್ತಾರೆಯೇ? KPCC ಅಧ್ಯಕ್ಷರೇ, ಹಿಂದೂಗಳ ಭಾವನೆ ಕೆಣಕುವ ಸಿದ್ದರಾಮಯ್ಯ ಚಾಳಿಗೆ ನೀವೂ ಕೈ ಜೋಡಿಸುತ್ತೀರಾ ಎಂದು KPCC ಅಧ್ಯಕ್ಷ ಡಿಕೆಶಿ ಅವರನ್ನು ಪ್ರಶ್ನಿಸಿದೆ.

ಕಾಂಗ್ರೆಸ್ ಪಕ್ಷದ ಬೌದ್ಧಿಕ ಸಾಮಥ್ರ್ಯ ವಿಸ್ತಾರಗೊಳಿಸಿದ ಮಾಜಿ ರಾಷ್ಟ್ರಪತಿ ದಿವಂಗತ ಪ್ರಣಬ್ ಮುಖರ್ಜಿ ಸಂಘ ಕಾರ್ಯಕ್ರಮಕ್ಕೆ ಭೇಟಿ ನೀಡಿ ಸೇವಾ ಕಾರ್ಯವನ್ನು ಶ್ಲಾಘಿಸಿದ್ರು. RSS ಕಾರ್ಯಕ್ರಮಗಳನ್ನು ಮೆಚ್ಚಿ ಹೊಗಳಿದ್ರು. ಹಾಗಾದ್ರೆ JDS ಬಿಟ್ಟು ವಲಸೆ ಬಂದಿರುವ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ನೈಜ ಕಾಂಗ್ರೆಸ್ಸಿಗರ ಬಗ್ಗೆ ಗೌರವವಿಲ್ಲ ಎಂದಾಯ್ತಲ್ಲವೇ? ಎಂದು BJP ಟ್ವೀಟ್ ಮಾಡುವ ಮೂಲಕ ಟಾಂಗ್ ನೀಡಿದೆ.

ಭಾರತೀಯ ಹಿಂದೂ ಪರಿಷತ್ ಬಿ.ಎಚ್‍.ಪಿ ಸ್ಥಾಪಿಸುವುದಾಗಿ ಕಾಂಗ್ರೆಸ್ ಹೇಳಿತ್ತು. ಆದರೆ ಕೇಡರ್ ಮಾದರಿಯಲ್ಲಿ ಪಕ್ಷ ಸಂಘಟಿಸುತ್ತೇವೆ ಎಂದಿತ್ತು. ಜೊತೆಗೆ ಪ್ರೇರಕ್ ಸೃಷ್ಟಿಸುತ್ತೇವೆ ಎಂದಿತ್ತು. ಸಂದರ್ಭಾನುಸಾರವಾಗಿ ಪ್ರಶಂಸೆ ವ್ಯಕ್ತಪಡಿಸಿದ್ದ ಕಾಂಗ್ರೆಸ್, ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವುದೇ ಎಂದು ಮರು ಪ್ರಶ್ನೆಯನ್ನು ಹಾಕಿದೆ.

error: Content is protected !!