ಮೈಸೂರು: ರೋಹಿಣಿ ಸಿಂಧೂರಿ ಮತ್ತು ಡಿ ರೂಪಾ ಮೌದ್ಗೀಲ್ ನಡುವೆ ನಡೆಯುತ್ತಿರುವ ಕೋಳಿ ಜಗಳಕ್ಕೆ ನಗರದ ಆರ್ ಟಿ ಐ ಕಾರ್ಯಕರ್ತನಿಂದ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಗಂಗರಾಜು ಹಾಗೂ ರೂಪಾ ಅವರು ಆಡಿಯೋ ಕ್ಲಿಪ್ ಒಂದು ಸಿಕ್ಕಿದೆ ಎನ್ನಲಾಗಿದ್ದು, ಈ ಕ್ಲಿಪ್ ನಲ್ಲಿ ರೂಪಾ ತಮ್ಮ ಪತಿ ಮುನೀಷ್ ಮೌದ್ಗೀಲ್ ಜೊತೆ ಜಮೀನು ಖರೀದಿಗೆ ಸಂಬಂಧಿಸಿದಂತೆ ಮಾತುಕತೆ ನಡೆಸಿದ ಸಂಗತಿಯನ್ನು ಗಂಗರಾಜು ಅವರಿಗೆ ಹೇಳುತ್ತಿದ್ದಾರೆ.
ಮುಂದೆ ಅವರು, ತಮ್ಮ ಪತಿ ಮನೆಯ ಕೆಲಸಗಳನ್ನು ನಿರ್ಲಕ್ಷಿಸಿ ಅವರಿವರ ಕೆಲಸಗಳನ್ನು ಮಾಡಿಕೊಡುವುದರಲ್ಲಿ ಮಗ್ನರಾಗುತ್ತಾರೆ ಅಂತ ಹೇಳುತ್ತಾರೆ. ಅವರು ಹೇಳೋದು ನಿಜವೇ ಅದಲ್ಲಿ, ಅದು ರೋಹಿಣಿಯ ತಪ್ಪಲ್ಲ, ರೂಪಾ ತಮ್ಮ ಪತಿಯೊಂದಿಗೆ ಕೂತು ಮಾತುಕತೆ ನಡೆಸಬೇಕಾದ ವಿಷಯ. ಹೌದು ತಾನೆ? ಸಂಭಾಷಣೆಯನ್ನು ಪೂರ್ತಿ ಕೇಳಿಸಿಕೊಳ್ಳಿ, ವಿಷಯ ಸ್ಪಷ್ಟವಾಗುತ್ತದೆ.