ಕೂಗು ನಿಮ್ಮದು ಧ್ವನಿ ನಮ್ಮದು

ನನಗೆ ಅವರ ಹೆಸರು ಹೇಳೋಕೆ ಬೇಸರ ಆಗುತ್ತದೆ, ಸಿಂಧೂರಿ ವಿರುದ್ಧ ಸಾರಾ ಮಹೇಶ್ ಪರೋಕ್ಷ ವಾಗ್ದಾಳಿ

ಬೆಂಗಳೂರು: ವಿಧಾನ ಸಭೆ ಕಲಾಪದಲ್ಲಿ ಶಾಸಕ ಸಾರಾ ಮಹೇಶ್ ರೋಹಿಣಿ ಸಿಂಧೂರಿ ವಿರುದ್ಧ ಹಕ್ಕುಚ್ಯುತಿ ಮಂಡನೆ ಮಾಡಿ, ನನಗೆ ಅವರ ಹೆಸರು ಹೇಳಲು ಬೇಜಾರಾಗುತ್ತದೆ ಎಂದು ವಾಗ್ದಾಳಿ ಮಾಡಿದ್ದಾರೆ.

ವಿಧಾನಸಭಾ ಕಲಾಪದ ವೇಳೆಯಲ್ಲಿ ಬ್ಯಾಗ್ ಖರೀದಿ ವಿಚಾರ ಪ್ರಸ್ತಾಪ ಮಾಡಿದಾಗ ಹೆಸರು ಹೇಳದೆ ಹಿಂದಿನ ಮೈಸೂರು ಜಿಲ್ಲಾಧಿಕಾರಿ ಎಂದು ಸಾರಾ ಮಹೇಶ್ ಹೇಳಿದಾಗ, ಹೆಸರು ಹೇಳಿ ಎಂದು JDS ಶಾಸಕರು ಒತ್ತಾಯಿಸಿದ್ರು. ಆಗ ಸಾರಾ ಮಹೇಶ್ ನನಗೆ ಅವರ ಹೆಸರು ಹೇಳೋದಕ್ಕೆ ಬೇಸರವಾಗುತ್ತದೆ. ಎಂದು ಪರೋಕ್ಷವಾಗಿ ರೋಹಿಣಿ ಸಿಂಧೂರಿ ವಿರುದ್ಧ ವಾಗ್ದಾಳಿಯನ್ನು ಮುಂದುವರಿಸಿದ್ದಾರೆ. ಹಿಂದಿನ ಮೈಸೂರು ಜಿಲ್ಲಾಧಿಕಾರಿ ಸ್ವಿಮ್ಮಿಂಗ್ ಪೂಲ್ ವಿಚಾರ ಸದನಲ್ಲಿ ಪ್ರಸಾಪವಾಗಿದೆ.

ಸ್ವಿಮ್ಮಿಂಗ್ ಪೂಲ್ ಕಟ್ಟಲು ಮೂವತ್ತು ಲಕ್ಷ ರೂಪಾಯಿ ಏಕೆ ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ರು. ಹಾಗೆಯೇ ಸ್ವಿಮ್ಮಿಂಗ್ ಪೂಲ್ ಫೋಟೋ ಪ್ರದರ್ಶನ ಮಾಡಿ ಮೈಸೂರು ಜಿಲ್ಲಾಧಿಕಾರಿ ವಿರುದ್ಧ ಹಕ್ಕುಚ್ಯುತಿ ವಿಚಾರ ಪ್ರಸ್ತಾಪ ಮಾಡಿದ್ದಾರೆ ಕ್ರೀಯಾ ಯೋಜನೆಯಲ್ಲಿ ಬ್ಯಾಗ್ ಖರೀದಿ ಮಾಡಿದ್ದಾರೆ. ಮೈಸೂರು ಪುರಸಭೆ, ತಾಲೂಕು ಪಂಚಾಯತಿ ಜಿಲ್ಲಾ ಪಂಚಾಯತಿ ಹಕ್ಕು ಮೊಟಕುಗೊಳಿಸಿ ಜಿಲ್ಲಾಧಿಕಾರಿ ನೇರವಾಗಿ ಖರೀದಿ ಮಾಡಿದ್ದಾರೆ.

ಸಾರಾ.ಮಹೇಶ್ ಒತ್ತಡ ತಂದು ವರ್ಗಾವಣೆ ಮಾಡಿದ್ದಾರೆ ಅಂತಾ ಯಾರದೋ ಕಾಲು ಕಟ್ಟಿ ಮೈಸೂರಿಗೆ ಜಿಲ್ಲಾಧಿಕಾರಿಯಾಗಿ ಬಂದಿದ್ದರು. ಬಳಿಕ ಮಾಡಿದ್ದೆಲ್ಲ ಅನಾಚಾರದ ಕೆಲಸವಾಗಿದೆ. ೩೦ ಲಕ್ಷಕ್ಕೆ ಸ್ವಿಮ್ಮಿಂಗ್ ಪೂಲ್ ಮಾಡಿಸಿಕೊಂಡ್ರು, ೧೫ ಲಕ್ಷಕ್ಕೆ ಕಚೇರಿ ನವೀಕರಣ ಮಾಡಿಸಿಕೊಂಡ್ರು ಎಂದು ಹೇಳುವ ಮೂಲಕ IAS ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಮಹೇಶ್ ಆರೋಪ ಮಾಡಿದ್ದಾರೆ ಆರೋಪದ ವೇಳೆ ನ್ಯೂಸ್ ಪೇಪರ್ ಕಟ್ಟಿಂಗ್ಸ್ ತೋರಿಸಿ ರೋಹಿಣಿ ಸಿಂಧೂರಿ ಎಂದ ಸಾರಾ.ಮಹೇಶ್, ನಾನು ಹೆಸರು ಹೇಳಲಿಲ್ಲ, ಆದ್ರೆ ಪೇಪರ್‌ ಅಲ್ಲಿ ಇರೋದನ್ನ ಹೇಳಿದ್ದೇನೆ ಎನ್ನುವ ಮೂಲಕ ಹೆಸರು ಹೇಳದೆ ಜಾರಿಕೊಂಡ್ರು

error: Content is protected !!