ಕೂಗು ನಿಮ್ಮದು ಧ್ವನಿ ನಮ್ಮದು

ರೋಹಿಣಿ ಸಿಂಧೂರಿ ನಿರ್ಮಿಸುತ್ತಿದ್ದಾರೆ ಎಂದು ಡಿ ರೂಪಾ ಆರೋಪ ಮಾಡಿರುವ ಬಂಗ್ಲೆ ಎಲ್ಲಿದೆ, ಹೇಗಿದೆ ಅಂತ ಗೊತ್ತಾ?

ಬೆಂಗಳೂರು: ಐಪಿಎಸ್ ಅಧಿಕಾರಿ ಡಿ ರೂಪಾ ಮೌದ್ಗೀಲ್ ಅವರು ಐಎಎಸ್ ಅಧಿಕಾರಿ ರೋಹಿಣಿ ವಿರುದ್ಧ ಮಾಡಿರುವ 19 ಆರೋಪಗಳಲ್ಲಿ ಅವರು ಯಲಹಂಕದ ನಿಟ್ಟೆ ಮೀನಾಕ್ಷಿ ಕಾಲೇಜು ರಸ್ತೆಯಲ್ಲಿರುವ ಸೆಂಚುರಿ ಆರ್ಟಿಜನ್ ಲೇಔಟ್ ನಲ್ಲಿ ನಿರ್ಮಿಸುತ್ತಿರುವ ಒಂದು ಭವ್ಯ ಬಂಗ್ಲೆಯೂ ಒಂದು. ವಿಡಿಯೋದಲ್ಲಿ ಕಾಣುತ್ತಿರುವ ಮನೆ ರೂಪಾ ಆರೋಪಿಸಿರುವಂಥದ್ದು. ಟಿವಿ9 ವರದಿಗಾರ ಸಂಗ್ರಹಿಸಿರುವ ಮಾಹಿತಿ ಪ್ರಕಾರ ಇಲ್ಲಿ ಪ್ರತಿ ಚದರ ಅಡಿ ಭೂಮಿಯ ಬೆಲೆ ಸುಮಾರು ರೂ.

30 ಸಾವಿರದಷ್ಟಿದೆ. 60X40 ನಿವೇಶನದಲ್ಲಿ ಮನೆಯನ್ನು ನಿರ್ಮಿಸಲಾಗಿದೆ. ಮನೆಗೆ ಸಂಬಂಧಿಸಿದಂತೆ ರೂಪಾ ಮಾಡಿರುವ ಆರೋಪಗಳಲ್ಲಿ ಇಟಲಿ ದೇಶದಿಂದ ತರಿಸಿರುವ ಸುಮಾರು ಒಂದು ಕೋಟಿ ರೂಪಾಯಿಗಳಿಗಿಂತ ಹೆಚ್ಚು ಬೆಲೆ ಬಾಳುವ ಫರ್ನೀಚರ್ ಸಹ ಸೇರಿವೆ.

error: Content is protected !!