ಕೂಗು ನಿಮ್ಮದು ಧ್ವನಿ ನಮ್ಮದು

ಆರೆಂಜ್ ಕ್ಯಾಪ್ ರೇಸ್ನಲ್ಲಿ ಆರ್ಸಿಬಿ ನಾಯಕನ ಅಕ್ಕ ಪಕ್ಕದಲ್ಲೂ ಯಾರಿಲ್ಲ..!

16ನೇ ಐಪಿಎಲ್ ನಿರೀಕ್ಷೆಗೂ ಮೀರಿದ ಯಶಸ್ಸು ಕಾಣುತ್ತಿದೆ. ಈ ಲೀಗ್ನಲ್ಲಿ ಇದುವರೆಗೆ 33 ಪಂದ್ಯಗಳು ಪೂರ್ಣಗೊಂಡಿದ್ದು ಒಂದೆಡೆ, ಪಾಯಿಂಟ್‌ ಪಟ್ಟಿಯಲ್ಲಿ ಮೇಲಕ್ಕೇರಲು ತಂಡಗಳ ನಡುವೆ ತೀವ್ರ ಕದನ ಮುಂದುವರೆದಿದೆ. ಇತ್ತ ಅತಿ ಹೆಚ್ಚು ರನ್ ಬಾರಿಸುವುದರೊಂದಿಗೆ ಆರೆಂಜ್ ಕ್ಯಾಪ್ ಗೆಲ್ಲುವುದಕ್ಕಾಗಿ ಆಟಗಾರರ ನಡುವೆಯೂ ಪೈಪೋಟಿ ಏರ್ಪಟ್ಟಿದೆ. ಹಾಗಿದ್ದರೆ, ಆರೆಂಜ್ ಕ್ಯಾಪ್ ರೇಸ್ನಲ್ಲಿರುವ ಟಾಪ್ 10 ಆಟಗಾರರು ಯಾರು ಎಂಬುದನ್ನು ಗಮನಿಸುವುದಾದರೆ.

ಆರೆಂಜ್ ಕ್ಯಾಪ್ ರೇಸ್ನಲ್ಲಿ ಸದ್ಯ ಆರ್ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಮುಂದಿದ್ದು, ಇದುವರೆಗೆ 7 ಇನ್ನಿಂಗ್ಸ್‌ಗಳನ್ನಾಡಿರುವ ಫಾಫ್ 405 ರನ್ ಬಾರಿಸಿದ್ದಾರೆ. 67.50 ಸರಾಸರಿಯಲ್ಲಿ ರನ್ ಕಲೆ ಹಾಕಿರುವ ಫಾಫ್ ಇದುವರೆಗೆ 33 ಬೌಂಡರಿ ಹಾಗೂ 25 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ.

ಎರಡನೇ ಸ್ಥಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಆರಂಭಿಕ ಆಟಗಾರ ಡೆವೊನ್ ಕಾನ್ವೇ ಇದ್ದು, ಈ ಆಟಗಾರ 7 ಇನ್ನಿಂಗ್ಸ್‌ಗಳಲ್ಲಿ ಸತತ ನಾಲ್ಕನೇ ಅರ್ಧಶತಕದೊಂದಿಗೆ 314 ರನ್ ಗಳಿಸಿದ್ದಾರೆ. ಇನ್ನು ಮೂರನೇ ಸ್ಥಾನದಲ್ಲಿ 285 ರನ್ ಸಿಡಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಡೇವಿಡ್ ವಾರ್ನರ್ ಇದ್ದಾರೆ. ನಾಲ್ಕನೇ ಸ್ಥಾನದಲ್ಲಿ ಆರ್ಸಿಬಿಯ ಮತ್ತೊಬ್ಬ ಓಪನರ್ ಕೊಹ್ಲಿ ಇದ್ದು, ವಿರಾಟ್ ಇದುವರೆಗೆ 7 ಇನ್ನಿಂಗ್ಸ್ಗಳಲ್ಲಿ 279 ಬಾರಿಸಿದ್ದಾರೆ.

262 ರನ್ ಬಾರಿಸಿರುವ ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆ ಎಲ್ ರಾಹುಲ್ 6ನೇ ಸ್ಥಾನದಲ್ಲಿದ್ದಾರೆ. 7 ಇನ್ನಿಂಗ್ಸ್ಗಳಲ್ಲಿ 254 ರನ್ ಬಾರಿಸಿರುವ ಕೆಕೆಆರ್ ಆರಂಭಿಕ ವೆಂಕಟೇಶ್ ಅಯ್ಯರ್ಗೆ 7ನೇ ಸ್ಥಾನ 8ನೇ ಸ್ಥಾನದಲ್ಲಿ ಆರ್ಸಿಬಿಯ ಮತ್ತೊಬ್ಬ ಆಟಗಾರ ಮ್ಯಾಕ್ಸ್ವೆಲ್ ಇದ್ದು, ಅವರು ಇದುವರೆಗೆ 253 ರನ್ ಚಚ್ಚಿದ್ದಾರೆ.
9ನೇ ಸ್ಥಾನದಲ್ಲಿ 244 ರನ್ಗಳೊಂದಿಗೆ ರಾಜಸ್ಥಾನ್ ರಾಯಲ್ಸ್ ಆರಂಭಿಕ ಜೋಸ್ ಬಟ್ಲರ್ ಇದ್ದಾರೆ. 10ನೇ ಸ್ಥಾನದಲ್ಲಿರುವ ಲಕ್ನೋ ಆರಂಭಿಕ ಕೈಲ್ ಮೇಯರ್ಸ್ 7 ಇನ್ನಿಂಗ್ಸ್ಗಳಲ್ಲಿ 243 ರನ್ ಸಿಡಿಸಿದ್ದಾರೆ.

error: Content is protected !!