ದುಬೈ: IPL ದ್ವಿತೀಯಾರ್ಧದ ೪೩ನೇ ಪಂದ್ಯದಲ್ಲಿ ಇಂದು ರಾಜಸ್ತಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಖಾಮುಖಿಯಾಗಲಿವೆ. ಬೆಂಗಳೂರು ಪ್ಲೇ ಆಫ್ ಪ್ರವೇಶಿಸಬೇಕಾದ್ರೆ ಉಳಿದಿರುವ ೪ ಪಂದ್ಯಗಳಲ್ಲಿ ೨ ಪಂದ್ಯಗಳನ್ನು ಗೆಲ್ಲಲೇ ಬೇಕಾಗಿದೆ. RCB ಆಡಿರುವ ಓಟ್ಟು ಹತ್ತುಪಂದ್ಯಗಳಲ್ಲಿ ೬ ರಲ್ಲಿ ಜಯ ಮತ್ತು ೪ ರಲ್ಲಿ ಸೋಲು ಕಂಡಿದೆ.
ಇನ್ನೂಂದು ಕಡೆ ಸತತ ಸೋಲುಗಳಿಂದ ಕಂಗೆಟ್ಟಿರುವ ರಾಜಸ್ಥಾನ ಟೂರ್ನಿಯಲ್ಲಿ ಉಳಿಯಬೇಕಾದ್ರೆ ಗೆಲುವು ಅನಿವಾರ್ಯವಾಗಿದೆ. ಒಟ್ಟು ಹತ್ತು ಪಂದ್ಯಗಳನ್ನು ಆಡಿರುವ ರಾಜಸ್ತಾನ್ ೪ಗೆಲುವು ಮತ್ತು ೬ ಸೋಲುಗಳನ್ನು ಕಂಡಿದೆ. ಅಂಕಪಟ್ಟಿಯಲ್ಲಿ ಬೆಂಗಳೂರು ೩ನೇ ಸ್ಥಾನದಲ್ಲಿದ್ರೆ, ರಾಜಸ್ಥಾನ ೭ನೇ ಸ್ಥಾನದಲ್ಲಿದೆ. ಉಭಯ ತಂಡಗಳು IPL ಇತಿಹಾಸದಲ್ಲಿ ಒಟ್ಟು ೨೩ ಬಾರಿ ಮುಖಾಮುಖಿಯಾಗಿದ್ದು, RCB ೧೧, ರಾಜಸ್ತಾನ್ ೧೦ ರಲ್ಲಿ ಗೆಲುವು ಸಾಧಿಸುವ ಮೂಲಕ ಸಮಬಲದ ಹೋರಾಟ ನಡೆಸಿವೆ.
RCB ಆಟಗಾರರು ಉತ್ತಮ ಫಾರ್ಮ್ನಲ್ಲಿದ್ದು, ಈ ಭಾರಿ ಪಂದ್ಯವನ್ನು ಗೆಲ್ಲುವ ಹುಮ್ಮಸಿನಲ್ಲಿದೆ.
ಕಳೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ತಂಡವನ್ನು ಸೋಲಿಸಿದ ನಂತರ ಬೆಂಗಳೂರು ತಂಡಕ್ಕೆ ಹೊಸ ಹುರುಪು ಸಿಕ್ಕಂತಾಗಿದೆ. ನಾಯಕ ವಿರಾಟ್ ಕೊಹ್ಲಿ ಮತ್ತು ಮಾಕ್ಸ್ವೆಲ್ ಅಬ್ಬರ RCB ತಂಡಕ್ಕೆ ಆನೆ ಬಲ ತಂದುಕೊಟ್ಟಿದೆ. ಬೌಲಿಂಗ್ ವಿಭಾಗದಲ್ಲೂ ಸಾಕಷ್ಟು ಸುಧಾರಿಸಿರುವ ಬೆಂಗಳೂರು ಈ ಸಲ IPL ಕಪ್ ಗೆಲ್ಲುವ ಕನಸು ಕಾಣುತ್ತಿದೆ.
ರಾಜಸ್ಥಾನ್ ರಾಯಲ್ಸ್ ಸಹ ಬಲಿಷ್ಟ ತಂಡವಾಗಿದ್ರು, ಆಟಗಾರರು ಹೇಳಿಕೊಳ್ಳುವಂತ ಪ್ರದರ್ಶನ ನೀಡುತ್ತಿಲ್ಲ. ಟೂರ್ನಿಯ ಆರಂಭದಲ್ಲಿ ಪಂಜಾಬ್ ವಿರುದ್ಧ ಪಸ್ಟ್ ಪಂದ್ಯ ಗೆದ್ದು ಉಳಿದ ಪಂದ್ಯಗಳನ್ನು ಗೆಲುವಿನ ಅಂತರದಲ್ಲಿ ಕೈಚೆಲ್ಲಿವೆ. ನಾಯಕ ಸಂಜು ಸಮ್ಸನ್, ಲಿವಿಸ್ ಬಿಟ್ರೆ ಉಳಿದ ಬ್ಯಾಟ್ಸ್ಮನ್ಗಳು ದೊಡ್ಡ ಮೊತ್ತ ಕಲೆ ಹಾಕುವಲ್ಲಿ ವಿಫಲವಾದ್ರು. ಬೌಲಿಂಗ್ ವಿಭಾಗ ಸಹ ಸ್ಥಿರ ಪ್ರದರ್ಶನ ನೀಡುವಲ್ಲಿ ಯಶಸ್ಸು ಕಾಣದಿರುವುದು ತಂಡಕ್ಕೆ ದೊಡ್ಡ ಹೊಡೆತವಾಗಿದೆ. ಜೊತೆಗೆ ಉಭಯ ತಂಡಗಳು ಇವತ್ತು ದುಬೈನಲ್ಲಿ ಸೆಣಸಾಟ ನಡೆಸಲಿವೆ. ಸೋಲಿನ ಸರಪಳಿ ಕಳಚಲು ರಾಜಸ್ತಾನ್ ರಾಯಲ್ಸ್ ಸಿದ್ದವಾಗಿದೆ. ಮತ್ತೊಂದೆಡೆ ಪ್ಲೇ ಆಫ್ ಗೆ ಲಗ್ಗೆ ಹಾಕಲು RCBಗೆ ಇನ್ನೆರೆಡು ಗೆಲುವ ಅಗತ್ಯವಾಗಿದೆ.