ಮೈಸೂರು: ಗೋಕಾಕ್ ಸಾಹುಕಾರ್ ರಮೇಶ್ ಜಾರಕಿಹೊಳಿ ಸುತ್ತೂರು ಶ್ರೀಗಳ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಬೆಳಗಾವಿ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಸಹೋದರ ಲಖನ್ ಜಾರಕಿಹೊಳಿ ಹಾಗೂ ಅಳಿಯ ಅಂಬಿರಾವ್ ಪಾಟೀಲ್ ಜೊತೆಗೆ ಸುತ್ತೂರು ಮಠದಲ್ಲಿ ಪುತ್ರ ಅಮರನಾಥ್ ಜಾರಕಿಹೊಳಿ ಸಾಥ್ ನೀಡಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರ ಮುಂಬೈನಲ್ಲಿ ತೀರ್ಮಾನ ಆಗಲಿದೆ. ಸದ್ಯಕ್ಕೆ ಇಲ್ಲಿ ಬಂದಿರೋದು ಸ್ವಾಮೀಜಿ ಅವರನ್ನು ಭೇಟಿ ಮಾಡೋಕೆ ಎಂದು ಹೇಳುವ ಮೂಲಕ ಸಿಎಂ ಯಡಿಯೂರಪ್ಪ ಬುಡಕ್ಕೆ ಸಾಹುಕಾರ್ ಬಾಂಬ್ ಇಟ್ಟಿದ್ದು, ಪುತ್ರ ಅಮರನಾಥ್ ಜಾರಕಿಹೊಳಿ ಜೊತೆಗೆ ಭೇಟಿ ನೀಡಿರೊ ಹಿಂದೆ ಹಲವು ರಾಜಕೀಯ ವಿಶ್ಲೇಷಣೆಗಳು ನಡೆಯುತ್ತಿವೆ.
ಅಮರನಾಥ್ ಜೊತೆ ಸಾಹುಕಾರ್ ಭೇಟಿಯ Exclusive ವಿಡಿಯೋಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಸಧ್ಯ ಸಿಡಿ ಪ್ರಕರಣದಿಂದ ನೊಂದಿರುವ ಸಾಹುಕಾರ್, ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ತಮ್ಮ ಸ್ಥಾನಕ್ಕೆ ಪುತ್ರ ಅಮರನಾಥ್ ಜಾರಕಿಹೊಳಿಯನ್ನ ತರುವಲ್ಲಿಯೂ ತೆರೆಮರೆಯಲ್ಲಿ ಯತ್ನಗಳು ನಡೆಯುತ್ತಿವೆ ಎನ್ನಲಾಗುತ್ತಿದ್ದು, ತಮ್ಮಿಂದ ತೆರವಾದ ಜಲಸಂಪನ್ಮೂಲ ಇಲಾಖೆಯ ಖಾತೆಯನ್ನು ತಮ್ಮ ಸುಪುತ್ರ ಅಮರನಾಥ್ ಜಾರಕಿಹೊಳಿಗೆ ನೀಡುವಂತೆ ಈಗಾಗಲೇ ಚರ್ಚೆಗಳು ನಡೆದಿದ್ದು, ಈ ವಿಚಾರವಾಗಿಯೇ ಇಂದು ಸುತ್ತೂರು ಶ್ರೀಗಳ ಜೊತೆಗೆ ಚರ್ಚೆಯಾಗಿದೆ ಎನ್ನುವ ಮಾಹಿತಿ ನ್ಯೂಸ್90 ಕರ್ನಾಟಕ ಕ್ಕೆ ಲಭ್ಯವಾಗಿದ್ದು, ಸಂಜೆ ಅದೇ ವಿಶೇಷ ವಿಮಾನದ ಮೂಲಕ ಬೆಳಗಾವಿಗೆ ವಾಪಸಾಗಲಿರುವ ಸಾಹುಕಾರ್, ನಾಳೆ ಅಥವಾ ಭಾನುವಾರ ಮತ್ತೆ ಮುಂಬೈಗೆ ತೆರಳಿ ಅಲ್ಲಿಂದಲೇ ಈ ವಿಚಾರವನ್ನು ಅಧಿಕೃತವಾಗಿ ಹೇಳಲಿದ್ದಾರೆ ಎನ್ನಲಾಗುತ್ತಿದೆ.