ಚಿಕ್ಕೋಡಿ-ಬೆಳಗಾವಿ: ಶೂರರ ವಿರುದ್ಧ ಷಡ್ಯಂತ್ರಗಳು ನಡೆಯುವುದು ಇತಿಹಾಸದಲ್ಲಿದೆ. ನನ್ನ ವಿರುದ್ಧ ನಡೆದಿರುವ ಷಡ್ಯಂತ್ರದ ಬಗ್ಗೆ ಭಗವಂತ ನೋಡಿಕೊಳ್ಳುತ್ತಾನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಬಗ್ಗೆ ಮೌನ ಮುರಿದ್ರು. ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿರುವ ರಮೇಶ್ ಜಾರಕಿಹೋಳಿ, ಶೂರರ ವಿರುದ್ಧವಾಗಿ ಷಡ್ಯಂತ್ರಗಳು ನಡೆಯುವುದು ಸಹಜ. ಇಂಥಹ ಷಡ್ಯಂತ್ರಗಳನ್ನು ನಾನು ಬಹಳ ಎದುರಿಸುತ್ತೇನೆ ಎಂದ್ರು.
ಸಿಡಿ ಪ್ರಕರಣ ಬಗೆಹರಿಸಲು ಸರ್ಕಾರ ಕಾಳಜಿ ತೋರುತ್ತಿಲ್ಲ ಎಂಬ ವಿಚಾರವಾಗಿ ಮಾತನಾಡಿದ ಜಾರಕಿಹೋಳಿ, ನನ್ನ ಸಿಡಿ ಪ್ರಕರಣ ಇತ್ಯರ್ಥ ಆಗಲು ಇನ್ನೂ ೧ ವರ್ಷ ಆಗ್ಲಿ, ನನಗೇನು ಆತುರವಿಲ್ಲ. ಜೊತೆಗೆ ನಾನು ಮಂತ್ರಿ ಆಗಬೇಕೆಂದಿಲ್ಲ. ನನ್ನ ಸಹೋದರ ಇದ್ದಾನೆ, ಶಾಸಕ ಮಹೇಶ್ ಕುಮಟಳ್ಳಿ ಮತ್ತು ಸಹೋದರ ಬಾಲಚಂದ್ರ ಜಾರಕಿಹೊಳಿ ಅವರಿಗೆ ಮಂತ್ರಿ ಸ್ಥಾನ ನೀಡಲಿ ಎಂದು ಜಾರಕಿಹೋಳಿ ಹೇಳಿದ್ರು.
ಮಂತ್ರಿ ಆಗಬೇಕು ಎಂಬ ಆಸೆ ನನಗೆ ಇಲ್ಲ. ಹೈ ಕಮಾಂಡ್ ನಿರ್ಧಾರಕ್ಕೆ ನಾನು ಬದ್ಧ ಎಂದು ರಮೇಶ್ ಜಾರಕಿಹೋಳಿ ಹೇಳಿದ್ದಾರೆ.
ಸಿಡಿ ಪ್ರಕರಣ ನ್ಯಾಯಾಲಯದಲ್ಲಿದೆ. ಆ ಬಗ್ಗೆ ನಾನು ಏನ್ನನ್ನು ಮಾತನಾಡುವದಿಲ್ಲ. R.S.S ಮತ್ತು BJP ಪಕ್ಷ ನೀಡಿದ್ದಷ್ಟು ಪ್ರೀತಿ ಕಾಂಗ್ರೆಸ್ ನಲ್ಲಿ ನನಗೆ ಸಿಕ್ಕಿಲ್ಲ. ಸೂತ್ತೂರು ಮಠದ ಸಲಹೆ ಕೇಳಿ ಅವರ ಆದೇಶ ಪಾಲಿಸಿದ್ದೇನೆ. ನನಗೆ ಸಚಿವ ಸ್ಥಾನ ಸಿಗಲಿ ಅಥವಾ ಬಿಡಲಿ ಸಮ್ಮಿಶ್ರ ಸರ್ಕಾರವನ್ನು ಬೀಳಿಸಿದ್ದಕ್ಕೆ ನನಗೆ ಈಗಲೂ ಸಂತೋಷವಿದೆ.
ನಾನು ಮಂತ್ರಿ ಆಗುತ್ತೇನೋ ಅಥವಾ ಇಲ್ಲವೋ ಗೊತ್ತಿಲ್ಲ. ಆದ್ರೆ ಸಿಎಂ, ನಮ್ಮ ಸ್ನೇಹಿತ ಬಸವರಾಜ್ ಬೊಮ್ಮಾಯಿ ಆಗಿರುವುದು ನನಗೆ ಬಹಳ ಸಂತೋಷವಾಗಿದೆ ಎಂದು ರಮೇಶ್ ಜಾರಕಿಹೋಳಿ ಹೇಳಿದ್ದಾರೆ. ಮುಂದಿನ ಚುನಾವಣೆಯಲ್ಲಿ BJP ರಾಜ್ಯದಲ್ಲಿ ಪೂರ್ಣ ಪ್ರಮಾಣ ಅಧಿಕಾರಕ್ಕೆ ಬರಬೇಕು. ಜೊತೆಗೆ BJP ಪಕ್ಷ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ತ್ಯಾಗ ಮನೋಭಾವದಿಂದ ಕೆಲಸ ನಾನು ಮಾಡುತ್ತೇನೆ. BJP ಅಧಿಕಾರಕ್ಕೆ ತರಲು ನಾನು ಎಲ್ಲ ತ್ಯಾಗಕ್ಕೂ ಸಿದ್ಧ ಎಂದು ಜಾರಕಿಹೋಳಿ ಹೇಳಿದ್ದಾರೆ. ರಾಜಕಾರಣದಲ್ಲಿ ಎಲ್ಲವನ್ನೂ ಬಹಿರಂಗಪಡಿಸಲು ಆಗುವುದಿಲ್ಲ. ಮಹೇಶ್ ಕುಮಟಳ್ಳಿಗೆ ಮುಂದಿನ ದಿನ ಹೆಚ್ಚಿನ ಸ್ಥಾನ ಸಿಗಬಹದು. ನಾನು ನೀರಾವರಿ ಮಂತ್ರಿ ಆಗಿದ್ದು, ಮಹೇಶ್ ಕುಮಟಳ್ಳಿ ಅವರಿಂದ ಹೈ ಕಮಾಂಡ್ ತೀರ್ಮಾನಕ್ಕೆ ನಾನು ಬದ್ಧ ಎಂದು ಮತ್ತೊಮ್ಮೆ ರಮೇಶ್ ಜಾರಕಿಹೋಳಿಯವರು ಸ್ಪಷ್ಟಪಡಿಸಿದ್ದಾರೆ.