ಮೈಸೂರು: ಗೋಕಾಕ್ ಸಾಹುಕಾರ್ ರಮೇಶ್ ಜಾರಕಿಹೊಳಿ ಸುತ್ತೂರು ಶ್ರೀಗಳ ಭೇಟಿಗೆ ಮೈಸೂರು ತಲುಪಿದ್ದಾರೆ. ಬೆಳಗಾವಿ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಸಹೋದರ ಲಖನ್ ಜಾರಕಿಹೊಳಿ ಹಾಗೂ ಅಳಿಯ ಅಂಬಿರಾವ್ ಪಾಟೀಲ್ ಜೊತೆಗೆ ಹೋಗಿರುವ ಸಾಹುಕಾರ್, ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರ ಮುಂಬೈನಲ್ಲಿ ತೀರ್ಮಾನ ಆಗಲಿದೆ. ಸದ್ಯಕ್ಕೆ ಇಲ್ಲಿ ಬಂದಿರೋದು ಸ್ವಾಮೀಜಿ ಅವರನ್ನು ಭೇಟಿ ಮಾಡೋಕೆ ಎಂದು ಹೇಳುವ ಮೂಲಕ ಸಿಎಂ ಯಡಿಯೂರಪ್ಪ ಬುಡಕ್ಕೆ ಬಾಂಬ್ ಇಟ್ಟಿದ್ದಾರೆ. ಇನ್ನು ಸಿಎಂ ಯಡಿಯೂರಪ್ಪ ಬಂದು ಭೇಟಿ ಮಾಡಿ ಎಂದಿರೋದು ನನಗೆ ಗೊತ್ತಿಲ್ಲ ಎಂದಿರುವ ಸಾಹುಕಾರ್, ಸಿಎಂ ತಮ್ಮ ಜೊತೆಗೆ ಸಂಪರ್ಕ ಮಾಡಿಲ್ಲ ಅನ್ನೊದನ್ನ ಈ ಮೂಲಕ ಸ್ಪಷ್ಟಪಡಿಸಿದ್ದಾರೆ.
ಮೈಸೂರಿನಲ್ಲಿ ಸಾಹುಕಾರ್ ರಮೇಶ್ ಜಾರಕಿಹೊಳಿ ಮಾತನಾಡಿರೋ EXCLUSIVE ಬೈಟ್ ನೋಡಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಇದೆ ವೇಳೆ ಮಾತನಾಡುತ್ತ ನಾನು ಮುಂಬೈಗೆ ಹೋಗಿರೋದು ರಾಜಕೀಯ ಇರಬಹುದು. ಆದರೆ ಸ್ವಾಮೀಜಿ ಅವರ ತಾಯಿ ಮೃತಪಟ್ಟ ಕಾರಣ ಇಲ್ಲಿಗೆ ಬಂದಿದ್ದೇನೆ. ಸರ್ಕಾರ ತಂದವನು ನಾನು, ನಾನು ಮಂತ್ರಿ ಸ್ಥಾನ ಕೇಳ್ತಿನಾ? ಎಂದ ಸಾಹುಕಾರ್, ಮಂತ್ರಿಗೋಸ್ಕರ ನಾನು ಸ್ವಾಮೀಜಿ ಅವರನ್ನು ಭೇಟಿ ಮಾಡ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಉಳಿದಂತೆ ಸ್ವಾಮೀಜಿಯನ್ನ ಭೇಟಿಯಾದ ಬಳಿಕ ನಾನು ಮಾತಾಡುತ್ತೇನೆ.
ರಾಜೀನಾಮೆ ಈಗಲ್ಲ, ಮುಂಬೈನಲ್ಲಿ ಹೋಗಿ ಮಾತಾಡುತ್ತೇನೆ ಎಂದು ಮೈಸೂರಿನ ವಿಮಾನ ನಿಲ್ದಾಣದಲ್ಲಿ ರಮೇಶ್ ಜಾರಕಿಹೊಳಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.