ಬೆಳಗಾವಿ: ಕೊನೆಗೂ ಬಹು ನಿರೀಕ್ಷಿತ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್ ಆಗಿದೆ. ಗೋಕಾಕ್ ಸಾಹುಕಾರ್ ರಮೇಶ್ ಜಾರಕಿಹೊಳಿ ಸೇರಿದಂತೆ ಬೆಳಗಾವಿ ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳಿಗೆ ಟಿಕೆಟ್ ಫೈನಲ್ ಆಗಿದ್ದು, ಇದರಲ್ಲಿಯೂ ಗೋಕಾಕ್ ಸಾಹುಕಾರ್ ಮೇಲುಗೈ ಸಾಧಿಸಿದ್ದಾರೆ.
ಅಥಣಿಯಿಂದ ಮಹೇಶ್ ಕುಮಟಳ್ಳಿಗೆ ಮತ್ತು ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ನಾಗೇಶ್ ಮನ್ನೋಳಕರ್ ಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಷ್ಟೇ ಅಲ್ಲಾ, ರಾಮದುರ್ಗ ಕ್ಷೇತ್ರದಿಂದ ಹಾಲಿ ಶಾಸಕ ಮಹಾದೇವಪ್ಪ ಯಾದವಾಡ್ ಬದಲಿಗೆ ಚಿಕ್ಕ ರೇವಣ್ಣ, ಖಾನಾಪುರ ಕ್ಷೇತ್ರದಿಂದ ವಿಠ್ಠಲ್ ಹಲಗೇಕರ್, ಬೈಲಹೊಂಗಲ ಕ್ಷೇತ್ರದಿಂದ ಜಗದೀಶ್ ಮೆಟಗುಡ್ಡ ಅವರಿಗೆ ಟಿಕೆಟ್ ಕೊಡಿಸುವಲ್ಲಿಯೂ ರಮೇಶ್ ಜಾರಕಿಹೊಳಿ ಮೇಲುಗೈ ಸಾಧಿಸಿದ್ದಾರೆ. ಈ ಮೂಲಕ ಬಿಜೆಪಿ ಹೈಕಮಾಂಡ್ ನಲ್ಲಿ ತಮ್ಮ ಹೋಲ್ಡ್ ಎಂತದ್ದು ಅನ್ನೊದನ್ನು ತೋರಿಸಿಕೊಟ್ಟಿರುವ ಸಾಹುಕಾರ್ ಶತಾಯ – ಗತಾಯ ತಮ್ಮ ಬೆಂಬಲಿಗ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವ ಶಪಥ ಮಾಡಿದ್ದು, ಎದುರಾಳಿ ಅಭ್ಯರ್ಥಿಗಳಿಗೆ ಢವ-ಢವ ಶುರುವಾಗಿದೆ.
ಉಳಿದಂತೆ ಬೆಳಗಾವಿ ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ವಿವರ ಹೀಗಿದೆ.
- ಗೋಕಾಕ್: ರಮೇಶ್ ಜಾರಕಿಹೊಳಿ
- ಅರಭಾವಿ: ಬಾಲಚಂದ್ರ ಜಾರಕಿಹೊಳಿ
- ಅಥಣಿ: ಮಹೇಶ ಕುಮಟಳ್ಳಿ
- ಕಾಗವಾಡ: ಶ್ರೀಮಂತ ಪಾಟೀಲ್
- ಚಿಕ್ಕೋಡಿ: ರಮೇಶ್ ಕತ್ತಿ
- ಹುಕ್ಕೇರಿ: ನಿಖಿಲ್ ಕತ್ತಿ
- ನಿಪ್ಪಾಣಿ: ಶಶಿಕಲಾ ಜೊಲ್ಲೆ
- ಕುಡಚಿ: ಪಿ.ರಾಜೀವ್
- ರಾಮದುರ್ಗ: ಚಿಕ್ಕ ರೇವಣ್ಣ
- ಖಾನಾಪುರ: ವಿಠ್ಠಲ್ ಹಲಗೇಕರ್
- ಕಿತ್ತೂರು: ಮಹಾಂತೇಶ ದೊಡ್ಡಗೌಡರ್
- ಬೈಲಹೊಂಗಲ: ಜಗದೀಶ್ ಮೆಟಗುಡ್
- ಸವದತ್ತಿ: ರತ್ನಾ ಮಾಮನಿ
- ರಾಯಬಾಗ: ದುರ್ಯೋಧನ ಐಹೊಳೆ
- ಯಮಕನಮರ್ಡಿ: ಬಸವರಾಜ ಹುಂದ್ರಿ
- ಬೆಳಗಾವಿ ಉತ್ತರ: ಡಾ.ರವಿ ಪಾಟೀಲ್
- ಬೆಳಗಾವಿ ಗ್ರಾಮಾಂತರ: ನಾಗೇಶ್ ಮನ್ನೊಳಕರ್
- ಬೆಳಗಾವಿ ದಕ್ಷಿಣ: ಅಭಯ್ ಪಾಟೀಲ್