ಕೂಗು ನಿಮ್ಮದು ಧ್ವನಿ ನಮ್ಮದು

ಡಿ.ಕೆ.ಶಿವಕುಮಾರನ್ನ ಪೂರ್ಣ ಪ್ರಮಾಣ ಮನೆಗೆ ಹಚ್ಚೊವರೆಗೆ ಬಿಡೊಲ್ಲಾ: ಗೋಕಾಕ್ ಸಾಹುಕಾರ್ ಶಪಥ

ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ‌. ಶಿವಕುಮಾರ್ ವಿರುದ್ಧ ಗೋಕಾಕ್ ಹುಲಿ ಘರ್ಜನೆ ಮಾಡಿದೆ. ಡಿಕೆಶಿಯನ್ನು ಮನೆಗೆ ಹಚ್ಚೊವರೆಗೆ ವಿಶ್ರಮಿಸಲ್ಲಾ ಎಂದ ಸಾಹುಕಾರ್ ರಮೇಶ ಜಾರಕಿಹೋಳಿ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದು, ಡಿ.ಕೆ.ಶಿವಕುಮಾರ ರಾಜಕೀಯ ಭವಿಷ್ಯ ಅಂತ್ಯ ಮಾಡುವ ಶತಪಥ ಮಾಡಿದ್ದಾರೆ.

ನಿನ್ನೆ ಗೋಕಾಕ ತಾಲೂಕಿನ ಕೊಣ್ಣೂರಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದ ಭಾಷಣದಲ್ಲಿ ವಾಗ್ದಾಳಿ ನಡೆಸಿದ ಸಾಹುಕಾರ, ನಾನು 6 ಬಾರಿ ಶಾಸಕನಾಗಿ, ಈಗ 7ನೇ ಬಾರಿ ಶಾಸಕನಾಗಿದ್ದೇನೆ. 8ನೇ ಬಾರಿ ಶಾಸಕನಾಗುವ ನಿರ್ಧಾರ
ನಿಮ್ಮ ಮೇಲೆ ಬಿಟ್ಟಿದ್ದೇನೆ. ಮುಂದಿನ ಬಾರಿಗೆ ಶಾಸಕನಾದ ಮೇಲೆ ರಾಜಕೀಯದಿಂದ ನಿವೃತ್ತಿ ಆಗಬೇಕೆಂದಿದ್ದೇನೆ ಎಂದು ತಮ್ಮ ಮನದಾಳ ತೆರೆದಿಟ್ಟಿದ್ದಾರೆ.

ಇದೇ ವೇಳೆ ಡಿ.ಕೆ.ಶಿವಕುಮಾರ ಅವರಿಗೆ ಸಾಹುಕಾರ್ ಚಾಲೆಂಜ್‌ ಮಾಡಿದ್ದು, ಈ ಬಾರಿ ಚುನಾವಣೆಗೆ ನಿಲ್ಲುತ್ತಿರಲಿಲ್ಲ. ಮಹಾನಾಯಕನಿಗೆ ಚಾಲೆಂಜ್ ಮಾಡಲಿಕ್ಕೆ ನಾನು ಚುನಾವಣೆ ನಿಲ್ಲುತಿದ್ದೇನೆ. ಅವನನ್ನು ಮೂಲೆಗೆ ಹಚ್ಚುವ ಸಲುವಾಗಿ ಚುನಾವಣೆ ನಿಲ್ಲುತಿದ್ದೇನೆ. ನನ್ನ ಮೇಲೆ ಷಡ್ಯಂತ್ರ ಮಾಡಿ, ಶಂಡನಂತೆ ರಾಜಕೀಯ ಮಾಡಿದ್ದಾನೆ. ಅವನನ್ನು ಪೂರ್ಣ ಪ್ರಮಾಣ ಮನೆಗೆ ಹಚ್ಚುವ ತನಕ ರಾಜಕೀಯದಿಂದ ನಿವೃತ್ತಿ ಆಗೋದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಏನೇ ತ್ಯಾಗ ಮಾಡಿಯಾದರೂ 2023 ಕ್ಕೆ ಮತ್ತೆ ಬಿಜೆಪಿ ಮುಖ್ಯಮಂತ್ರಿ ಮಾಡ್ತೀನಿ ಎಂದ ಸಾಹುಕಾರ್ ಡಿಕೆಶಿ ರಾಜಕೀಯ ಭವಿಷ್ಯ ಮುಗಿಸುವ ಶಪಥ ಮಾಡಿದ್ದಾರೆ.

error: Content is protected !!