ಬೆಳಗಾವಿ: ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಗೋಕಾಕ್ ನಲ್ಲಿ ಮಾಚಿ ಸಚಿವ ರಮೇಶ್ ಜಾರಕಿಹೊಳಿ ಮಾಧ್ಯಮದವರ ಮುಂದೆ ಮಾತನಾಡಿ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ. ಮುಂದಿನ ಎರಡು ವರ್ಷ ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ. ಅವರ ನೇತೃತ್ವದಲ್ಲಿ ಮುಂದಿನ ಚುನಾವಣೆಯನ್ನು ಎದುರಿಸುತ್ತೇವೆ, ನಾವು ಯಡಿಯೂರಪ್ಪ ಹಾಗೂ ಅಮಿತ್ ಷಾ ನಂಬಿ ಬಿಜೆಪಿ ಗೆ ಬಂದಿದ್ದೇವೆ ಎಂದರು.ಇನ್ನೂ ಕೆಲವು ಶಾಸಕರು ಯಡಿಯೂರಪ್ಪ ವಿರುದ್ಧ ಅಪಸ್ವರ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಾಹುಕಾರ್ ಬಿಜೆಪಿಯಲ್ಲಿದ್ದ ಎಲ್ಲಾ ಶಾಸಕರೂ ಒಂದು ಕುಟುಂಬ ಇದ್ದಹಾಗೆ. ಯಡಿಯೂರಪ್ಪ ಎಲ್ಲರನ್ನು ಕರೆದು ಮಾತನಾಡಬೇಕು.
ಇನ್ನೂ ವಿರೋಧ ಪಕ್ಷದವರಿಗೆ ಮಾಡಲು ಬೇರೆ ಕೆಲಸ ಇಲ್ಲ. ಈ ತಿಂಗಳ 18 ರ ನಂತರ ರಾಜ್ಯದಲ್ಲಿ ಹೊಸ ಯಡಿಯೂರಪ್ಪ ಆಗಿ ಕೆಲಸ ಮಾಡುತ್ತಾರೆ. ರಾಜ್ಯದ ಮೂಲೆ ಮೂಲೆಗೆ ತೆರಳಿ ಕೆಲಸ ಮಾಡ್ತಾರೆ. ಸಿ ಪಿ ಯೋಗೇಶ್ವರ ಈಗಲೂ ನನ್ನ ಸ್ನೇಹಿತ. ಅವನಿಗೆ ನಾನು ಈ ಮಾಧ್ಯಮಗಳ ಮೂಲಕ ಏನಾದ್ರೂ ತಪ್ಪು ಗ್ರಹಿಕೆ ಇದ್ದರೆ ಯಡಿಯೂರಪ್ಪ ಮುಂದೆ ಕುಳಿತು ಮಾತನಾಡಿ ಸರಿ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿಕೊಳ್ಳುತ್ತೆನೆ ಎಂದರು.