ಬಳ್ಳಾರಿ: ಉಜ್ಜಿನಿ ಪೀಠಕ್ಕೆ ಏಕಾಏಕಿ ಮತ್ತೊರ್ವ ಸ್ವಾಮೀಜಿ ನೇಮಕ ಮಾಡೋದಾಗಿ ಹೇಳಿಕೆ ನೀಡಿದ ಹಿನ್ನಲೆ ರಂಭಾಪೂರಿ ಶ್ರೀಗಳ ವಿರುದ್ಧ ಕೊಟ್ಟೂರು ಉಜ್ಜಿನಿ ಪೀಠದ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಲಿ ಇರುವ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಗಳನ್ನೇ ಮುಂದುವರೆಸುವಂತೆ ಅಲ್ಲಿಯ ಭಕ್ತರು ಒತ್ತಾಯ ಮಾಡುತ್ತಿದ್ದಾರೆ. ಪಂಚ ಪೀಠಗಳಾದ ಶ್ರೀಶೈಲ, ಕೇದಾರ, ರಂಭಾಪೂರಿ, ಕಾಶಿ ಪೀಠಗಳಲ್ಲಿ ಒಂದಾದ ಉಜ್ಜಿನಿ ಪೀಠಕ್ಕೆ 2011 ರಲ್ಲಿ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಗಳ ಪಟ್ಟಾಧಿಕಾರ ಮಾಡಲಾಗಿತ್ತು. ಅಂದು ಕೇಧಾರ, ಶ್ರಿಶೈಲ, ರಂಭಾಪೂರಿ ಸ್ವಾಮಿಗಳ ಮುಂದಾಳತ್ವದಲ್ಲಿ ಪೀಠಾಧಿಪತಿಯಾಗಿದ್ರು.
ಉಜ್ಜಿನಿ ಪೀಠದ ಮೂಲ ಪೀಠ ಮಧ್ಯಪ್ರದೇಶದಲ್ಲಿದ್ರೂ ಬಳ್ಳಾರಿ ಜಿಲ್ಲೆಯ ಉಜ್ಜೈನಿ ಕ್ಷೇತ್ರ ಕೂಡ ಅಷ್ಟೇ ಮಹತ್ವದಾಗಿದೆ. ಶ್ರೀಮದ್ ರಂಭಾಪುರಿ ಪೀಠಾಧ್ಯಕ್ಷರ ಸಮಕ್ಷಮದಲ್ಲಿ ಗದಗಿನ ಮುಕ್ತಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಶ್ರೀಗಳು ಈ ಹೇಳಿಕೆ ನೀಡಿದ್ದಾರೆ. ಕೊಟ್ಟೂರು ಉಜ್ಜಯಿನಿ ಪೀಠಕ್ಕೆ ನೂತನವಾಗಿ ತ್ರಿಲೋಚನಾ ಸ್ವಾಮೀಜಿ ಅವರನ್ನು ಘೋಷಣೆ ಮಾಡಬೇಕೆನ್ನುವುದಾಗಿದೆ ಎಂದು ರಂಭಾಪುರಿ ಶ್ರೀಗಳು ಹೇಳಿದ್ದು, ಉಜ್ಜೈನಿ ಪೀಠದ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲಿನ ಭಕ್ತರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ರಂಭಾಪೂರ ಶ್ರೀಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಉಜ್ಜಯಿನಿ ಸದ್ದರ್ಮ ಪೀಠದಲ್ಲಿ ಮುಕ್ತಿ ಮಂದಿರದ ಘೋಷಣೆ ಹಿನ್ನಲೆಯಲ್ಲಿ ಭಕ್ತರು ಸಭೆ ಸೇರುತ್ತಾರೆ ಎಂಬ ಸುದ್ದಿ ಹರಡಿತ್ತು. ಆದ್ರೇ ಇದುವರೆಗೂ ಯಾವುದೇ ಸಭೆ ನಡೆದಿಲ್ಲ. ಸ್ವಾಮೀಜಿಯವರ ಬೆಂಬಲಾರ್ಥ ಶೀಘ್ರದಲ್ಲೇ ಕೊಟ್ಟೂರು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸುವ ಯೋಜನೆ ಇದೆ ಎಂದು ಕೆಲ ಭಕ್ತರು ತಿಳಿಸಿದ್ದಾರೆ. ಈ ಹಿನ್ನೆಲೆ ಕೊಟ್ಟೂರು ಪೊಲೀಸರಿಂದ ಮಠಕ್ಕೆ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಈ ಮಧ್ಯೆ ನಿನ್ನೆ ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಉಜ್ಜಯಿನಿ ಸದ್ಧರ್ಮ ಪೀಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡದಿದ್ರು.