ಕೂಗು ನಿಮ್ಮದು ಧ್ವನಿ ನಮ್ಮದು

ಡಾ. ರಾಜ್‌ಕುಮಾರ್ ಕುಟುಂಬದದಿಂದ ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್

ಬೆಂಗಳೂರು: ಡಾ.ರಾಜ್‌ಕುಮಾರ್ ರವರ ಕುಟುಂಬದವರು ಸಿನಿಮಾದಿಂದ ಮಾತ್ರವಲ್ಲದೇ ಅನೇಕ ಉತ್ತಮ ಸಾಮಾಜಿಕ ಕಾರ್ಯಗಳಿಂದ ಹೆಸರುವಾಸಿಯಾಗಿದ್ದಾರೆ. ದಾನ ಧರ್ಮದಲ್ಲಿಅಣ್ಣಾವ್ರು ಫ್ಯಾಮಿಲಿ ಸದಾ ಮುಂದೆ ಇರುತ್ತೆ ಎಂಬುವುದು ಗೊತ್ತಿರುವ ವಿಷಯವೇ ಆಗಿದೆ.ಇವರ ಕಾರ್ಯಗಳು ಸಮಾಜಕ್ಕೆ ಮಾದರಿಯಾಗಿರುವ ಅನೇಕ ಉದಾಹರಣೆ ಕಣ್ಣಾ ಮುಂದಿದೆ. ವರನಟ ಮಾತ್ರವಲ್ಲದೇ ಅವರ ಇಡೀ ಕುಟುಂಬ ಸಾಮಾಜಿಕ ಕಳಕಳಿ ಹಾಗೂ ದಾನ ಧರ್ಮವನ್ನು ಇಂದಿಗೂ ಪಾಲಿಸುತ್ತಿದ್ದಾರೆ.

ಇದೀಗ ಅವರ ಕುಟುಂಬದವರು ಒಂದೆಜ್ಜೆ ಮುಂದಿಟ್ಟಿದೆ. ವಿದ್ಯಾರ್ಥಿಗಳ ಸಲುವಾಗಿ ಹೊಸ ಪ್ರತಿಭೆಗಳನ್ನು ಹೊರತರಲು ಕಲಿಕಾ ವೇದಿಕೆಯೊಂದಿಗೆ 2021ರಲ್ಲಿ ಗುಣಮಟ್ಟದ ಶಿಕ್ಷಣ ಎಲ್ಲರಿಗೂ ಎನ್ನುವ ಉದ್ದೇಶದಿಂದ ಡಾ. ರಾಜ್ ಕುಮಾರ್ ಅಕಾಡೆಮಿಯು ‘ಡಾ. ರಾಜ್ ಕುಮಾರ್ ಲರ್ನಿಂಗ್ ಆಪ್‌’ ಅನ್ನು ಪ್ರಾರಂಭಿಸಲಾಗಿತ್ತು.

ಆ ಯೋಜನೆ ಇಂದಿಗೂ ಕಾರ್ಯಚಲಿತವಾಗಿದ್ದೂ, ಕನ್ನಡ ಕಲಿಕೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ, ಪಿಯುಸಿ ಶಿಕ್ಷಣ ಸೇರಿದಂತೆ ಹಲವು ಹಂತದ ಕಲಿಕೆಗಳಿಗೆ ಆಪ್‌ ವೇದಿಕೆಯಾಗಿದೆ. ನಿಗದಿತ ಶುಲ್ಕ ಪಾವತಿಸಿ ಆಪ್‌‌ನಲ್ಲಿ ಕಲಿಕೆಗೆ ನೋಂದಾಯಿಸಿಕೊಳ್ಳಬಹುದಾಗಿದೆ.

ಕೆಲ ದಿನಗಳ ಹಿಂದೆಯಷ್ಟೇ ಈ ವರ್ಷದ ದ್ವಿತೀಯ ಪಿಯುಸಿ ಫಲಿತಾಂಶ ಹೊರ ಪ್ರಕಟವಾಗಿದೆ. ಅಂಥಹ ವಿದ್ಯಾರ್ಥಿಗಳು ಇದರ ಸದು ಉಪಯೋಗ ಪಡೆದುಕೊಳ್ಳಬಹುದಾಗಿದೆ. ಹಾಗೆಯೇ ಪಿಯುಸಿ ಹೊರತು ಪಡಿಸಿ ಯಾವೆಲ್ಲಾ ವಿದ್ಯಾರ್ಥಿಗಳು .. ಈ ಸ್ಕಾಲರ್ಶಿಪ್‌ ಪಡೆದುಕೊಳ್ಳವ ಮಾಹಿತಿಗಾಗಿ ಈ ಕೆಳಕಂಡ ಅಪ್ಲಿಕೇಷನ್‌ ಮೂಲಕ ತಿಳಿದುಕೊಳ್ಳಿ .

error: Content is protected !!