ಕೊಡಗು: ಮಳೆಗಾಲ ಆರಂಭ ಹಿನ್ನೆಲೆ ಜಿಲ್ಲೆಗೆ NDRF ತುಕಡಿ ಆಗಮಿಸಿದ್ದಾರೆ. ಹೌದು ಕಳೆದ ಮಳೆಗಾಲದಲ್ಲಿ ಆದ ಅನಾಹುತ ಸಂಬಂಧ ಇದೀಗ ಇನ್ಸ್ಪೆಕ್ಟರ್ ಶಾಂತಿಲಾಲ್ ಜಟಿಯಾ ನೇತೃತ್ವದಲ್ಲಿ NDRF ತಂಡ ಆಗಮಿಸಿದ್ದು, ಅದರಲ್ಲಿ 25 ಯೋಧರು ಇದ್ದಾರೆ.
ಇನ್ನು ಈ ಕುರಿತು ‘ಮುಂದಿನ ಮೂರು ತಿಂಗಳು ಜಿಲ್ಲೆಯಲ್ಲೇ ಉಳಿದುಕೊಳ್ಳಲಿದ್ದಾರೆ. ಮಳೆಗಾಲದ ವಿಪತ್ತು ಎದುರಿಸಲು ಸರ್ವ ಸನ್ನದ್ಧವಾಗಿದ್ದು, ಅಪಾಯಕಾರಿ ಪ್ರದೇಶಗಳ ಅವಲೋಕನ ಮಾಡುತ್ತೇವೆ ಎಂದು ಬೆಟಾಲಿಯನ್ ಕಮಾಂಡರ್ ಶಾಂತಿಲಾಲ್ ಹೇಳಿದರು.