ಮಂಡ್ಯ: ಜಿಲ್ಲೆಯ K.R ಪೇಟೆ ತಾಲೂಕಿನ ವ್ಯಾಪ್ತಿ ಕಳೆದ ರಾತ್ರಿಯಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಗೆ K.R ಪೇಟೆ ಪಟ್ಟಣದಲ್ಲಿ ಕೆಲವು ಅವಘಡಗಳು ನಡೆದಿವೆ. ಬಹಳ ಪ್ರಮಾಣದಲ್ಲಿ ಸುರಿದ ಮಳೆಯಿಂದ K.R ಪೇಟೆಯ MDCC ಬ್ಯಾಂಕ್‍ನ ಕಚೇರಿಗೆ ನೀರು ನುಗ್ಗಿದ ಪರಿಣಾಮ, ಕಚೇರಿಯಲ್ಲಿದ್ದ ಕಂಪ್ಯೂಟರ್, ದಾಖಲೆಗಳು ಹಾನಿಯಾಗಿವೆ. ಮುಂಜಾನೆ ಕಚೇರಿಗೆ ಬಂದ ಸಿಬ್ಬಂದಿ ಬ್ಯಾಂಕ್ ಒಳ ಭಾಗದಲ್ಲಿ ನೀರಿನಲ್ಲಿ ನೆನೆದಿರುವ ವಸ್ತುಗಳನ್ನು ಹೊರತೆಗೆದು ಆರಿಸುವ ಕೆಲಸಕ್ಕೆ ಮುಂದಾಗಿದ್ದಾರೆ.
ಗುರುವಾರ ರಾತ್ರಿಯೇ ಮಳೆ ನೀರು ನುಗ್ಗಿರುವ ಪರಿಣಾಮ KSRTC ಬಸ್ ನಿಲ್ದಾಣ ಸಂಪೂರ್ಣವಾಗಿ ಜಲಾವೃತಗೊಂಡಿತ್ತು. ಇದರಿಂದ ಬಸ್ಸಿಗಾಗಿ ಕಾದು ಕುಳಿತಿದ್ದ ಪ್ರಯಾಣಿಕರು ನೀರಿನಲ್ಲಿ ಮುಳುಗಿದ್ರು. ಕೊನೆಗೆ ಅಗ್ನಿ ಶಾಮಕದಳ ಸಿಬ್ಬಂದಿಗಳು ನೀರಿನಲ್ಲಿ ಇದ್ದ ಪ್ರಯಾಣಿಕರನ್ನು ರಕ್ಷಣೆ ಮಾಡುವ ಕೆಲಸಕ್ಕೆ ಮುಂದಾದ್ರು. ಇದಲ್ಲದೇ ಪಟ್ಟಣದ ಕೆಲ ಬಡಾವಣೆಗಳಿಗೂ ನೀರು ನುಗ್ಗಿರುವ ಪರಿಣಾಮ ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇಷ್ಟೆಲ್ಲಾ ಅವಾಂತರಕ್ಕೆ ಸರಿಯಾದ ಒಳಚರಂಡಿ ಇಲ್ಲದಿರುವುದೇ ಕಾರಣ ಎಂದು ಅಲ್ಲಿಯ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ರು.