ಕೂಗು ನಿಮ್ಮದು ಧ್ವನಿ ನಮ್ಮದು

ಬಿಸಿಲಿನಿಂದ ಕಂಗೆಟ್ಟ ಜನರಿಗೆ ತಂಪೆರೆದ ವರುಣ: ಮಳೆಯಿಂದ ಇಳಕಲ್ ಭಾಗದ ರೈತರಲ್ಲಿ ಸಂತಸ

ಬಾಗಲಕೋಟೆ: ಕಳೆದ ಕೆಲ ದಿನಗಳಿಂದ ಬಿಸಿಲಿನ ತಾಪಕ್ಕೆ ಕಂಗೆಟ್ಟಿದ್ದ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ಜಿಲ್ಲೆಯ ಇಳಕಲ್ ನಗರದಲ್ಲಿ ಸುಮಾರು ಅರ್ಧ ಗಂಟೆವರೆಗೆ ಗಾಳಿ, ಗುಡುಗು ಜೊತೆಗೆ ಭಾರೀ ಮಳೆ ಸುರಿದಿದ್ದು, ಪರಿಣಾಮ ಭೂಮಿ ತಂಪಾಗಿದೆ.

ವರುಣನ ಸಿಂಚನ ಇಳಕಲ್ ಭಾಗದ ರೈತರಲ್ಲಿ ಸಂತಸ ಮೂಡಿಸಿದೆ. ಬಿಸಿಲಿನಿಂದ ಕಂಗೆಟ್ಟವರಿಗೆ ಮಳೆರಾಯ ಕರುಣೆ ತೋರಿದ್ದಾನೆ

error: Content is protected !!