ನವದೆಹಲಿ: ಕೇಂದ್ರ ಸರ್ಕಾರದ ನೂತನ ಕೃಷಿ ಕಾನೂನನ್ನು ವಿರೋಧಿಸಿ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷರಾದ, ಸಂಸದ ರಾಹುಲ್ ಗಾಂಧಿಯವರು ಟ್ರ್ಯಾಕ್ಟರ್ ನಲ್ಲಿ ಸಂಸತ್ ಭವನಕ್ಕೆ ಬಂದು ಪ್ರತಿಭಟನೆಯನ್ನು ನಡೆಸಿದ್ರು. ಇನ್ನೂ ಇದೇ ವೇಳೆ ಟ್ರ್ಯಾಕ್ಟರ್ ಅಲ್ಲಿಯೇ ರಣ್‍ದೀಪ್ ಸುರ್ಜೇವಾಲಾ, ಮತ್ತು ದೀಪೇಂದ್ರ ಹುಡ್ಡಾ ಸೇರಿದಂತೆ ಅನೇಕ ಕಾಂಗ್ರೆಸ್‌ನ ನಾಯಕರು ಆಗಮಿಸಿದ್ರು. ಜೊತೆಗೆ
ಕೇಂದ್ರ ಸರ್ಕಾರವು ರೈತರ ಸಮಸ್ಯೆಗಳನ್ನು ಕೇಳುತ್ತಿಲ್ಲ. ಇನ್ನೂ ಈ ಕೂಡಲೇ ನೂತನ ಕೃಷಿ ಕಾನೂನುಗಳನ್ನು ಹಿಂಪಡೆದುಕೊಳ್ಳಬೇಕೆಂದು ಪ್ರತಿಭಟನೆ ನಡೆಸಿದರು.
ಇನ್ನೂ ಈ ಸರ್ಕಾರವು ಪ್ರತಿಭಟನಾ ನಿರತ ರೈತರನ್ನು ಭಯೋತ್ಪಾದಕರಿಗೆ ಹೋಲಿಕೆ ಮಾಡಿ ಅವಮಾನ ಮಾಡಿದೆ. ಎಂದು ರಾಹುಲ್ ಗಾಂಧಿಯವರು ಆಕ್ರೋಶವನ್ನು ಹೊರಹಾಕಿದ್ರು. ಇನ್ನೂ ಅಧಿವೇಶನ ಆರಂಭದ ಹಿನ್ನೆಲೆಯಲ್ಲಿ ದೆಹಲಿಯ ಜಂತರ್ ಮಂತರ್ ಬಳಿಯಲ್ಲಿ ಪ್ರತಿ ನಿತ್ಯವೂ ೨೦೦ ರೈತರು ಪ್ರತಿಭಟನೆಯನ್ನು ನಡೆಸುತ್ತಿದ್ರು. ಜೊತೆಗೆ ಜಂತರ್ ಮಂತರ್ ಅಲ್ಲಿ ಅಧಿವೇಶನ ಮುಗಿಯುವ ವರೆಗೂ ಪ್ರತಿಭಟನೆಯನ್ನು ನಡೆಸಲು ರೈತರು ತೀರ್ಮಾನ ಮಾಡಿದ್ದಾರೆ. ಇನ್ನೂ ಕಳೆದ ೧ ವರ್ಷದಿಂದ ಕೃಷಿ ಕಾನೂನನ್ನು ವಿರೋಧಿಸಿ ರಾಜಧಾನಿ ದೆಹಲಿಯ ಗಡಿ ಭಾಗಗಳಾದ ಸಿಂಘು, ಟಿಕ್ರಿ, ಗಾಜೀಪುರದಲ್ಲಿ ರೈತರು ಪ್ರತಿಭಟನೆಯನ್ನು ನಡೆಸುತ್ತಿದ್ರು.