ಕೂಗು ನಿಮ್ಮದು ಧ್ವನಿ ನಮ್ಮದು

ವಜಾ ಮಾಡೋದಾದ್ರೆ ಕಾಂಗ್ರೆಸ್‍ನವರನ್ನೇ ಮಾಡಬೇಕು: ಅಶೋಕ್

ಬೆಂಗಳೂರು: ಕಾಂಗ್ರೆಸ್‍ನವರಿಗೆ ಮಾತನಾಡುವ ನೈತಿಕತೆಯೇ ಇಲ್ಲ. ವಜಾ ಮಾಡೋದಾದ್ರೆ ಕಾಂಗ್ರೆಸ್ ಅವರನ್ನೇ ಮಾಡಬೇಕೆಂದು ಸಚಿವ ಆರ್. ಅಶೋಕ ಕೆಂಡಕಾರಿದ್ರು. ಮಾದ್ಯಮದವರೊಂದಿಗೆ ಮಾತನಾಡಿದ ಆರ್ ಅಶೋಕ, ಕೋಳಿನಾ ಕೇಳಿ ಖಾರ ಅರಿಯೋ ಅಭ್ಯಾಸ ಬಿಜೆಪಿಗಿಲ್ಲ. ವಜಾ ಮಾಡುವುದಾದ್ರೆ ಕಾಂಗ್ರೆಸ್ ಅವರನ್ನು ವಜಾ ಮಾಡಬೇಕು. ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನದ ಭಯೋತ್ಪಾದಕರು ಬಾವುಟ ಹಾರಿಸಿ ಎಂದಾಗ ಇವರು ಎಲ್ಲಿದ್ದರು? ಇದು ಕಾಂಗ್ರೆಸ್ ಅವರ ರಾಜಕೀಯ ಮೇಲಾಟ ಅಷ್ಟೆ.

ಧರಣಿ ಮಾಡ್ಲಿ, ನಮಗೆ ಏನೂ ತೊಂದರೆ ಇಲ್ಲ. ನರೇಂದ್ರ ಮೋದಿ ಅವರು ಬಂದ ಮೇಲೆ ಇವರು ಎಲ್ಲಾ ಕಡೆ ನಿದ್ದೆ ಮಾಡುತ್ತಿದ್ದಾರೆ ಎಂದು ಆರ್ ಅಶೋಕ ಟೀಕಿಸಿದ್ರು.
ಸಚಿವ ಈಶ್ವರಪ್ಪ ಮಾತಾನಾಡಿರುವ ಪೂರ್ತಿ ವಿಷಯದಲ್ಲಿ ರಾಷ್ಟ್ರ ಧ್ವಜಕ್ಕೆ ಯಾರದಾರೂ ಅಗೌರವ ತೊರಿಸಿದ್ರೆ ಅವರು ದೇಶದ್ರೋಹಿಗಳು ಎಂದು ಹೇಳಿದ್ದಾರೆ. ಇದರಲ್ಲಿ ಈಶ್ವರಪ್ಪ ಅವರ ಪಾತ್ರ ಏನಿಲ್ಲ, ಎಂದು ಹೇಳಿದ ಅವರು, ಕಾಂಗ್ರೆಸ್ ಅವರು ಪ್ರಚಾರ ತೆಗೆದುಕೊಳ್ಳಲು ಈ ರೀತಿ ಮಾಡುತ್ತಿದ್ದಾರೆ. ಅಲ್ಪ ಸಂಖ್ಯಾತರ ಓಲೈಕೆಗೆ ಕಾಂಗ್ರೆಸ್ ಮುಂದಾಗಿದೆ. ಇದೆಲ್ಲಾ ನಾಟಕ, ಜಸ್ಟ್ ಶೋ ಎಂದು ಕುಮಾರಸ್ವಾಮಿಯೇ ಹೇಳಿದ್ದಾರೆ.

ನಿನ್ನೆ ಸದನದಲ್ಲಿ ನಡೆದ ವರ್ತನೆ ಇದು ಕಾಂಗ್ರೆಸ್‍ನ ಗೂಂಡಾಗಿರಿಯಾಗಿದೆ ಎಂದು ಆರ್ ಅಶೋಕ ಕಿಡಿಕಾರಿದರು. ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಧ್ವಜಾರೋಹಣ ಮಾಡಲು ಹೋದಾಗ ಧ್ವಜ ಹಾರಿಸಬಾರದೆಂದು ಕಾಂಗ್ರೆಸ್‍ನವರು ಲಾಠಿ ಚಾರ್ಜ್ ಮಾಡಿದ್ರು. ಜಮ್ಮು ಕಾಶ್ಮೀರದಲ್ಲಿ ಉಗ್ರರ ಸವಾಲು ಮೆಟ್ಟಿ ರಾಷ್ಟ್ರಧ್ವಜ ಹಾರಿಸಿದ್ದೇವೆ. ಕಾಂಗ್ರೆಸ್‍ನವರು ಧರಣಿ ಮಾಡ್ಲಿ, ನಿದ್ರೆ ಮಾಡ್ಲಿ, ಸರ್ಕಾರ ಎಲ್ಲಾ ವ್ಯವಸ್ಥೆ ಮಾಡುತ್ತೆ ಎಂದು ಅಶೋಕ ವ್ಯಂಗ್ಯ ಮಾಡಿದರು.

ಎಲ್ಲಾ ಕಡೆ ಕಾಂಗ್ರೆಸ್ ಖಾಲಿ ಆಗುತ್ತಿದೆ. ಬಿಜೆಪಿ ಇಲ್ಲ ಅಂದಿದ್ದರೆ ಕಾಂಗ್ರೆಸ್ ಭಾರತ್ ಮಾತಾ ಕಿ ಜೈ ಎನ್ನುತ್ತಿರಲಿಲ್ಲ. ಇವರಿಗೆ ಇಟಲಿ ಮೇಲೆ ತುಂಬಾ ಆಸೆ. ಇಟಲಿಯವರು ಏನ್ ಹೇಳುತ್ತಾರೋ ಅದನ್ನು ಕೇಳುತ್ತಾರೆ. ಮತ್ತು ಇವರಿಗೆ ಅಲ್ಪಸಂಖ್ಯಾತರ ಓಲೈಕೆ ಮಾಡುವುದಷ್ಟೇ ಗೊತ್ತು ಎಂದು ಆರ್ ಅಶೋಕ್ ಹೇಳಿದರು. ಮಹಾತ್ಮ ಗಾಂಧೀಜಿ ಇದ್ದಾಗ ಇದ್ದಿದ್ದು ಬೇರೆ ಕಾಂಗ್ರೆಸ್. ಈಗ ಇರುವುದು ನಕಲಿ ಕಾಂಗ್ರೆಸ್. ಸ್ವಾತಂತ್ರ್ಯ ಹೋರಾಟದಲ್ಲಿದ್ದ ಕಾಂಗ್ರೆಸ್‍ಗೂ ಈಗಿರುವ ಕಾಂಗ್ರೆಸ್‍ಗೂ ಯಾವುದೇ ಸಂಬಂಧವಿಲ್ಲ ಎಂದು ಆರ್ ಅಶೋಕ ಹೇಳಿದರು.

error: Content is protected !!