ಬೆಂಗಳೂರು: ಪುನೀತ್ ನಿಧನರಾದ ಬಳಿಕ ಜಯದೇವ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಶೇಕಡಾ 30ರಷ್ಟು ಹೆಚ್ಚಾಗಿದೆ ಎಂದು ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಹೇಳಿದ್ರು. ಮಾದ್ಯಮದವರ ಜೊತೆಗೆ ಮಾತನಾಡಿದ ಜಯದೇವ ಹೃದಯಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ಪಡೆಯಲು ಜಯದೇವ ಆಸ್ಪತ್ರೆಗೆ ಬರುತ್ತಿರೋ ರೋಗಿಗಳ ಸಂಖ್ಯೆ ಹೆಚ್ಚಳವಾಗಿದೆ ಎಂದ್ರು.
ಸಾಮಾನ್ಯವಾಗಿ ಜಯದೇವ ಆಸ್ಪತ್ರೆಯಲ್ಲಿ ಹೊರರೋಗಿಗಳ ಸಂಖ್ಯೆ ೧೨೦೦ ಇರುತ್ತಿತ್ತು. ಆದ್ರೆ ಈಗ ಹೊರ ರೋಗಿಗಳ ಸಂಖ್ಯೆ ೧೭೦೦ ರಿಂದ ೧೮೦೦ಗೆ ಏರಿಕೆ ಆಗಿದೆ. ನವೆಂಬರ್ ಮೊದಲ ಹಾಗೂ ಎರಡನೇ ವಾರದ ಬಳಿಕ ರೋಗಿಗಳ ಸಂಖ್ಯೆ ಹೆಚ್ಚಾಗ್ತಾ ಇದೆ. ನಿನ್ನೆ ಹಬ್ಬದ ದಿನ ಕೂಡ ರೋಗಿಗಳ ಸಂಖ್ಯೆ ಹೆಚ್ಚಳವಾಗಿದ್ದು, ಸಾಮಾನ್ಯವಾಗಿ ಹಬ್ಬದ ದಿನ ೬೦೦ ಜನ ಹೊರ ರೋಗಿಗಳ ವಿಭಾಗಕ್ಕೆ ಬರುತ್ತಾರೆ. ಆದ್ರೆ ನಿನ್ನೆ ಹಬ್ಬ ಇದ್ದರೂ ೧೦೦೦ ಜನ ಬರುತ್ತಿದ್ದಾರೆ.
ವಯಸ್ಕರು, ವಯಸ್ಸಾದವರು ಸಹ ಚೆಕಪ್‍ಗೆ ಬರುತ್ತ ಇದ್ದಾರೆ ಎಂದು ಹೇಳಿದ್ರು. ೧೮೦೦ ರೋಗಿಗಳಲ್ಲಿ ೯೦೦ ರೋಗಿಗಳು ರೊಟೀನ್ ಚೆಕಪ್‍ಗೆ ಬರುವವರು, ಉಳಿದ ೯೦೦ ರೋಗಿಗಳು ಹೊಸಬರು ಭಯ, ಆತಂಕದಿಂದ ಚೆಕಪ್‍ಗೆ ಬಂದಿದ್ದಾರೆ. ಆದ್ರೆ ಅವರು ಯಾವಾಗಲೋ ಒಂದು ಸಲ ಬಂದ್ರೆ ಆಗಲ್ಲ, ಪ್ರತಿ ವರ್ಷ ಚೆಕ್ ಮಾಡಿಸಬೇಕು ಎಂದು ಸಲಹೆಯನ್ನೂ ಅವರು ಇದೇ ವೇಳೆ ನೀಡಿದ್ರು.