ಕಾರವಾರ: ಇಲ್ಲಿಯ ಕಾಸರಕೋಡು ಟೋಂಕಾ ಪ್ರದೇಶದಲ್ಲಿ ಖಾಸಗಿ ಬಂದರು ನಿರ್ಮಾಣಕ್ಕೆ ತಯಾರಿ ನಡೆಸುತ್ತಿದ್ದ ಹಿನ್ನಲೆಯಲ್ಲಿ ಮೀನುಗಾರರು ಪ್ರತಿಭಟನೆ ನಡೆಸಿದ್ದಾರೆ. ಮೀನುಗಾರರ ಮನೆಗಳಿದ್ದ ಜಾಗದಲ್ಲಿ ಬಂದರು ಸಂಪರ್ಕ ರಸ್ತೆ ನಿರ್ಮಾಣವನ್ನು ಖಂಡಿಸಿ ಪ್ರತಿಭಟಿಸಿದ ಪ್ರತಿಭಟನಾಕಾರರು ಏಕಾ ಏಕಿ ಮನೆಗಳ ತೆರವಿಗೆ ಮುಂದಾದ ಹಿನ್ನಲೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಇದೇ ವೇಳೆ ಪ್ರತಿಭಟನೆಯಲ್ಲಿ ಪಾಲ್ಗೊಂಡ ಯುವಕ ಪ್ರತಿಭಟನೆ ನಡೆಸಿ ಮನೆಗಳ ತೆರವು ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ಮನವಿ ಸಮುದ್ರಕ್ಕೆ ಇಳಿದು ಆಕ್ರೋಶ ವ್ಯಕ್ತಪಡಿಸಿದ, ನಂತರ ಪೊಲೀಸರು ಮತ್ತು ಕಾರವಳಿ ಕಾವಲು ಪಡೆಯಿಂದ ಯುವಕನ ಮನವೊಲಿಸಿದರು. ಇದರಿಂದ ಕೆಲ ಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾವಾಗಿತ್ತು.
ಈ ಪ್ರತಿಭಟನೆಯಿಂದ ನೂರಾರು ಪೊಲೀಸರು ಸ್ಥಳದಲ್ಲಿ ನಿಯೋಜನೆಗೊಂಡಿದ್ದಾರೆ.
ಸುಮಾರು ವರ್ಷಗಳಿಂದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಈ ಕಾಸರಕೋಡು ಟೋಂಕಾ ಪ್ರದೇಶದಲ್ಲಿ ಮೀನುಗಾರರು ವಾಸಿಸುತ್ತಿದ್ದು, ಆದರೆ ಏಕಾ ಏಕಿ ಮನೆಗಳ ತೆರವಿಗೆ ಮುಂದಾದ ಅಧಿಕಾರಿಗಳ ಕಾರ್ಯವೈಖರಿಗೆ ಮೀನುಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ನೂರಾರು ಮೀನುಗಾರರು ಸ್ಥಳದಲ್ಲಿ ಬೀಡು ಬಿಟ್ಟಿದ್ದು ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿದ್ದಾರೆ.