ವೀಕೆಂಡ್ ವಿತ್ ರಮೇಶ್ ಸೀಸನ್ 5’ರಲ್ಲಿ ಹಲವು ಸಾಧಕರು ಬಂದು ಹೋಗಿದ್ದಾರೆ. ಎಲ್ಲರೂ ತಮ್ಮ ಜರ್ನಿ ಬಗ್ಗೆ, ಕಷ್ಟದ ದಿನಗಳ ಬಗ್ಗೆ, ಯಶಸ್ಸು ಕಂಡ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ವಿಕೆಂಡ್ ವಿತ್ ರಮೇಶ್ ಮೊದಲ ಸೀಸನ್ನಿಂದ ಐದನೇ ಸೀಸನ್ವರೆಗೆ ಒಟ್ಟೂ 99 ಸಾಧಕರು ಬಂದು ಹೋಗಿದ್ದಾರೆ. 100ನೇ ಸಾಧಕನಾಗಿ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆಗಮಿಸುತ್ತಿದ್ದಾರೆ. ಇದರ ಶೂಟಿಂಗ್ ಈಗಾಗಲೇ ಪೂರ್ಣಗೊಂಡಿದೆ.
ಈ ಮೊದಲು ಮಾತನಾಡಿದ್ದ ರಮೇಶ್ ಅರವಿಂದ್ ಅವರು ನೂರನೇ ಅತಿಥಿ ಹೇಗಿರಲಿದ್ದಾರೆ ಎಂಬುದನ್ನು ವಿವರಿಸಿದ್ದರು. ‘ಐದನೇ ಸೀಸನ್ನ ಮೊದಲ ಅತಿಥಿಯಾಗಿ ರಮ್ಯಾ ಬರುತ್ತಿದ್ದಾರೆ. ನೂರನೇ ಅತಿಥಿ ತುಂಬಾನೇ ವಿಶೇಷವಾಗಿರಲಿದ್ದಾರೆ’ ಎಂದು ರಮೇಶ್ ಅರವಿಂದ್ ಹೇಳಿದ್ದರು. ಈಗ ನೂರನೇ ಅತಿಥಿಯಾಗಿ ಡಿಕೆ ಶಿವಕುಮಾರ್ ಆಗಮಿಸುತ್ತಿದ್ದಾರೆ.
ರಾಜ್ಯ ಕಂಡ ಪ್ರಚಂಡ ರಾಜಕಾರಣಿ, ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರ ಬದುಕಿನ ಜರ್ನಿ ಅನಾವರಣ. ವೀಕೆಂಡ್ ವಿತ್ ರಮೇಶ್-5 ಗ್ರ್ಯಾಂಡ್ ಫಿನಾಲೆ. ಶನಿ-ಭಾನು ರಾತ್ರಿ 9ಕ್ಕೆ’ ಎಂದು ಹೊಸ ಪ್ರೋಮೋ ಹಂಚಿಕೊಂಡು ಕ್ಯಾಪ್ಶನ್ ನೀಡಲಾಗಿದೆ. ಈ ಮೂಲಕ ‘ವೀಕೆಂಡ್ ವಿತ್ ಎಪಿಸೋಡ್ ಸೀಸನ್ 5’ ಕೊನೆ ಆಗಲಿದೆ ಎಂದು ವಾಹಿನಿ ಕಡೆಯಿಂದ ಮಾಹಿತಿ ಸಿಕ್ಕಿದೆ