ಬೆಂಗಳೂರು: ಶಿಕ್ಷಣ ಸಚಿವರು ದ್ವಂದ್ವ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಖಾಸಗಿ ಶಾಲೆಗಳ ಒಕ್ಕೂಟ ಅಸಮಧಾನ ವ್ಯಕ್ತಪಡಿಸಿದೆ. ಶಿಕ್ಷಣ ಸಚಿವರು ಫೀಸ್ ವಿಚಾರದಲ್ಲಿ ದ್ವಂದ್ವ ನೀತಿಯ ಹೇಳಿಕೆ ನೀಡುತ್ತಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದಿದ್ದೇವೆ. ಪೋಷಕರು ಕಳೆದ ಮೂರು ವರ್ಷದಿಂದ ಫೀಸ್ ಸರಿಯಾಗಿ ಕಟುತ್ತಿಲ್ಲ. ಈ ಬಗ್ಗೆ ಶಿಕ್ಷಣ ಇಲಾಖೆ ಯಾವುದೇ ಆದೇಶ ಹೊರಡಿಸಿಲ್ಲ. ಫೀಸ್ ಹೆಚ್ಚುವರಿ ವಸೂಲಿ ಮಾಡುವ ಸಂಸ್ಥೆಗಳ ವಿರುದ್ಧ ಕ್ರಮವಹಿಸಲಿ ಎಂದು ಖಾಸಗಿ ಶಾಲೆಗಳ ಒಕ್ಕೂಟ ಒತ್ತಾಯಿಸಿದೆ. ಪೋಷಕರಿಗೆ ಫೀಸ್ ಕೇಳಿದ್ರೆ ಸಚಿವರೂ ದೂರು ನೀಡಿ ಅನ್ನೊದು ಎಷ್ಟರ ಮಟ್ಟಿಗೆ ಸರಿ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶುಲ್ಕದ ಬಗ್ಗೆ ನಿಗದಿಯಾಗಿಲ್ಲ. ಈಗ ಪೆಟ್ರೋಲ್, ಡೀಸೆಲ್ ಸೇರಿ ಹಲವು ವಸ್ತುಗಳ ಬೆಲೆ ಏರಿಕೆಯಾಗಿದೆ. ಆದರೆ ಯಾವುದೇ ಶಿಕ್ಷಣ ಸಂಸ್ಥೆ ಶುಲ್ಕವನ್ನು ಏರಿಕೆ ಮಾಡಿಲ್ಲ. ನಾವು ಕಳೆದ ವರ್ಷದ ಬಾಕಿ ಶುಲ್ಕ ಪಾವತಿಗೆ ಆಗ್ರಹಿಸುತ್ತಿದ್ದೇವೆ. ಈ ವರ್ಷದ ಕನಿಷ್ಠ ಶುಲ್ಕ ಕಟ್ಟಿ ದಾಖಲಾಗಲು ಹೇಳುತ್ತಿದ್ದೇವೆ. ಈಗ ಸಚಿವರು ನೀವೇ ಸಮಸ್ಯೆ ಬಗೆಹರಿಸಿಕೊಳ್ಳಿ ಎನ್ನುತ್ತಿದ್ದಾರೆ. ಸಚಿವರು ಇಂಥಹ ಗೊಂದಲದ ಹೇಳಿಕೆ ನೀಡುವುದು ಬಿಡಬೇಕು. ಫೀಸ್ ಗೊಂದಲಕ್ಕೆ ಸ್ಪಷ್ಟೀಕರಣ ನೀಡಬೇಕು ಎಂದು ಒತ್ತಾಯಿಸಿದರೆ. ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಇಂದು (ಜೂನ್ 13) ಮಧ್ಯಾಹ್ನ ಖಾಸಗಿ ಶಾಲಾ ಒಕ್ಕೂಟ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲು ಮುಂದಾಗಿದೆ. ಖಾಸಗಿ ಶಾಲಾ ಒಕ್ಕೂಟ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲು ನಿರ್ಧರಿಸಿದ್ದು, ಸಭೆಯಲ್ಲಿ ಒಕ್ಕೂಟದ ಸರ್ವ ಸದಸ್ಯರು ಭಾಗಿಯಾಗಲಿದ್ದಾರೆ.