ಕೂಗು ನಿಮ್ಮದು ಧ್ವನಿ ನಮ್ಮದು

ಸಿಎಂ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್ ಅವರಿಗೆ ಸನ್ಮಾನ ಕುರಿತು ಪೂರ್ವಭಾವಿ ಸಭೆ

ಚಿತ್ರದುರ್ಗ: ಚಿತ್ರದುರ್ಗದ ಇಮ್ಮಡಿ ಶ್ರೀಸಿದ್ದರಾಮೇಶ್ವರ ಶ್ರೀಗಳ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಭೋವಿ ಸರ್ಕಾರಿ ನೌಕರರ ಸಂಘದ ಸಭೆ ನಡೆಯಿತು. ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಪ್ರಧಾನ ಕಾರ್ಯದರ್ಶಿ, ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಎನ್.ಮಂಜುನಾಥ ಪ್ರಸಾದ್, ಐಎಎಸ್ ಅವರಿಗೆ ರಾಜ್ಯದ ಸಮಸ್ತ ಭೋವಿ ಸರ್ಕಾರಿ ನೌಕರರಿಂದ ಸನ್ಮಾನ ಕಾರ್ಯಕ್ರಮ

ಹಾಗೂ ನಿವೃತ್ತಿಯ ಅಂಚಿನಲ್ಲಿರುವ ಜನಾಂಗದ ನೌಕರರಿಗೆ ಸನ್ಮಾನ, ಜನಾಂಗದ ಐಎಎಸ್, ಕೆಎಎಸ್ ಹಾಗೂ ಇಲಾಖೆಗಳ ಹಿರಿಯ ಅಧಿಕಾರಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಸಲುವಾಗಿ ಹಾಗೂ ನೌಕರರೊಂದಿಗೆ ಚಿಂತನ-ಮಂಥನ, ಜನಾಂಗದ/ ಸಮುದಾಯದಲ್ಲಿ ವಿಶೇಷ ಸಾಧನೆ ಮಾಡಿದ ನೌಕರರಿಗೆ ಸನ್ಮಾನ ಕುರಿತು

ದಿನಾಂಕ 28-8-2021ರ ಶನಿವಾರ ಬೆಳಿಗ್ಗೆ 10.30ಕ್ಕೆ ಚಿತ್ರದುರ್ಗದ ಭೋವಿ ಗುರುಪೀಠದಲ್ಲಿ ಪೂರ್ವಭಾವಿ ಸಭೆ ಜರುಗಿತು. ಸಭೆಯಲ್ಲಿ ಚಿತ್ರದುರ್ಗದ ಇಮ್ಮಡಿ ಶ್ರೀಸಿದ್ದರಾಮೇಶ್ವರ ಶ್ರೀಗಳು ಸೇರಿದಂತೆ ಭೋವಿ ನೌಕರರ ಸಂಘದ ಅಧ್ಯಕ್ಷರು, ಪದಾದಿಕಾರಿಗಳು ಭಾಗವಹಿಸಿದ್ದರು.

error: Content is protected !!