ಕೂಗು ನಿಮ್ಮದು ಧ್ವನಿ ನಮ್ಮದು

ಪಾಕಿಸ್ತಾನ ಪರ ಘೋಷಣೆ ಕೂಗಿದವರ ಎನ್‌ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್

ಮೈಸೂರು: ಕವಲಂದೆಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದವರ ಎನ್‌ಕೌಂಟರ್ ಮಾಡಬೇಕು. ಈ ಘೋಷಣೆಗೆ ಪ್ರಚೋದನೆ ನೀಡಿರುವ ಮೌಲ್ವಿಯನ್ನು ಮೊದಲು ಬಂಧಿಸಿ ಎಂದು ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ. ಮೈಸೂರಿನಲ್ಲಿ ಮಾದ್ಯಮ ಒಂದರಲ್ಲಿ ಮಾತನಾಡಿದ ಪ್ರಮೋದ್ ಮುತಾಲಿಕ್, ಪಾಕಿಸ್ತಾನ ಪರ ಘೋಷಣೆ ಎಂಬುದು ಕ್ಯಾನ್ಸರ್ ರೀತಿ. ಇದನ್ನು ನಾಶ ಮಾಡಲೇಬೇಕು.

ಬಾಯಿ ತಪ್ಪಿ ಇಂತಹ ಮಾತು ಅವರ ಬಾಯಲ್ಲಿ ಬರುವುದಿಲ್ಲ. ಇದು ಉದ್ದೇಶ ಪೂರ್ವಕ ಮಾತು ಎಂದು ಕಿಡಿಕಾರಿದರು. ಮೇ ಒಂಬತ್ತರಿಂದ ರಾಜ್ಯದ ದೇವಸ್ಥಾನಗಳಲ್ಲಿ ಸುಪ್ರಭಾತ ಮೊಳಗಿಸುತ್ತೇವೆ. ಮಸೀದಿಗಳ ಮೇಲಿನ ಅಕ್ರಮ ಮೈಕ್ ತೆಗೆಯುವವರೆಗೂ ಇದು ನಡೆಯುತ್ತದೆ. ಮಸೀದಿ ಮೇಲೆ ಮೈಕ್ ಕಟ್ಟುವುದು ಮೂಲಭೂತ ಹಕ್ಕು ಅಲ್ಲ ಎಂದು ಕೋರ್ಟ್ ಹೇಳಿದೆ. ಇದನ್ನು ಪಾಲಿಸಿ ಎಂದು ಆಗ್ರಹಿಸಿದರು. ಚಾಮುಂಡಿ ಬೆಟ್ಟದ ದೇವಸ್ಥಾನದ ವ್ಯಾಪ್ತಿಯಲ್ಲಿ ಆರು ಮುಸ್ಲಿಮರ ಅಂಗಡಿಗಳಿವೆ. ಇದು ತೆರವಾಗಬೇಕು. ಸರ್ಕಾರ ತೆರವು ಮಾಡದೆ ಇದ್ದರೆ ನಾವೇ ತೆರವು ಮಾಡುತ್ತೇವೆ ಎಂದು ಎಚ್ಚರಿಸಿದರು.

error: Content is protected !!