ಕುಣಿಗಲ್ ಶಾಸಕ ಹೆಚ್. ಡಿ. ರಂಗನಾಥ್ ಅವರು ದೇವರು, ರೈತರು, ಡಿ.ಕೆ. ಶಿವಕುಮಾರ್ ಮತ್ತು ದೊಡ್ಡೇಗೌಡ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಬಸವನಗುಡಿ ಕ್ಷೇತ್ರದ ಶಾಸಕರಾಗಿ ರವಿ ಸುಬ್ರಹ್ಮಣ್ಯ ಅವರು ಭಗವಂತನ ಹೆಸರಿನಲ್ಲಿ, ಕೆಜಿಎಫ್ ಶಾಸಕಿಯಾಗಿ ರೂಪಕಲಾ ಪ್ರಮಾಣವಚನ ಸ್ವೀಕಾರ ಮಾಡಿದರು. ನರಗುಂದ ಕ್ಷೇತ್ರದ ಶಾಸಕರಾಗಿ ಸಿ.ಸಿ.ಪಾಟೀಲ್, ಬೀಳಗಿ ಕ್ಷೇತ್ರದ ಶಾಸಕರಾಗಿ ಜೆ.ಟಿ.ಪಾಟೀಲ್, ವಿರಾಜಪೇಟೆ ಕ್ಷೇತ್ರದ ಶಾಸಕರಾಗಿ
ಎ.ಎಸ್.ಪೊನ್ನಣ್ಣ, ರಾಣೆಬೆನ್ನೂರು ಶಾಸಕರಾಗಿ ಪ್ರಕಾಶ್ ಕೋಳಿವಾಡ, ಗೌರಿಬಿದನೂರು ಕ್ಷೇತ್ರದ ಶಾಸಕರಾಗಿ ಪುಟ್ಟಸ್ವಾಮಿಗೌಡ, ಚಾಮರಾಜನಗರ ಕ್ಷೇತ್ರದ ಶಾಸಕರಾಗಿ ಪುಟ್ಟರಂಗಶೆಟ್ಟಿ, ಚಳ್ಳಕೆರೆ ಕ್ಷೇತ್ರದ ಶಾಸಕರಾಗಿ ರಘುಮೂರ್ತಿ, ಕೊಪ್ಪಳ ಕ್ಷೇತ್ರದ ಶಾಸಕರಾಗಿ ರಾಘವೇಂದ್ರ ಹಿಟ್ನಾಳ್, ಶೃಂಗೇರಿ ಕ್ಷೇತ್ರದ ಶಾಸಕರಾಗಿ ಟಿ.ಡಿ.ರಾಜೇಗೌಡ, ಜಯನಗರ ಕ್ಷೇತ್ರದ ಶಾಸಕರಾಗಿ ರಾಮಮೂರ್ತಿ ಪ್ರಮಾಣವಚನ ಸ್ವೀಕಾರ ಮಾಡಿದರು