ಕೂಗು ನಿಮ್ಮದು ಧ್ವನಿ ನಮ್ಮದು

ಪ್ರಕಾಶ್ ಹುಕ್ಕೇರಿ ಬಿಜೆಪಿಗೆ..!? ಕೈ ಬುಡಕ್ಕೆ ಬರ್ತಿ ಇಟ್ರಾ ಮೀಸೆ ಮಾವ..?

ಚಿಕ್ಕೋಡಿ: ಬೆಳಗಾವಿ ಸಂಸದ ದಿವಂಗತ ಸುರೇಶ ಅಂಗಡಿ ಅಕಾಲಿಕ ನಿಧನದಿಂದ ತೆರವಾಗಿರೋ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸುರೇಶ ಅಂಗಡಿ ಕುಟುಂಬದ ಕುಟುಂಬದ ಬೆನ್ನಿಗೆ ನಿಲ್ತಿನಿ, ಅವರ ಪರವಾಗಿ ಪ್ರಚಾರ ಮಾಡ್ತೀನಿ ಎಂದು ಮಾಜಿ ಸಚಿವ, ಕಾಂಗ್ರೆಸ್ ನಾಯಕ ಪ್ರಕಾಶ ಹುಕ್ಕೇರಿ ಹೇಳಿದ್ದಾರೆ. ಚಿಕ್ಕೋಡಿಯಲ್ಲಿ ಆಪ್ತ ವಲಯದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಕಾಶ ಹುಕ್ಕೇರಿಯವರು ಸುರೇಶ ಅಂಗಡಿ ಕುಟುಂಬಕ್ಕೆ ಬಿಜೆಪಿ ಟಿಕೆಟ್ ನೀಡಿದರೆ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಪ್ರಚಾರ ಮಾಡ್ತೀನಿ. ಬೆಳಗಾವಿ ಲೋಕಸಭಾ ಕ್ಷೇತ್ರದ ಪ್ರತಿಯೊಂದು ಹಳ್ಳಿ ಹಳ್ಳಿಗೆ ಹೋಗಿ ಪ್ರಚಾರ ಮಾಡ್ತಿನಿ. ಸುರೇಶ್ ಅಂಗಡಿ ಕುಟುಂಬಸ್ಥರನ್ನು ಜವಾಬ್ದಾರಿಯಿಂದ ಗೆಲ್ಲಿಸಿಕೊಂಡು ಬರುತ್ತೇನೆ ಎಂದಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಏನ್ ಅಂದ್ರು ನಾ ತಲೆ ಕಡಿಸಿಕೊಳ್ಳೊದಿಲ್ಲ. ಅದೇನು ಕ್ರಮ ತೆಗೆದುಕೊಳ್ಳತಾರೋ ತೆಗೆದುಕೊಳ್ಳಲಿ ಅಂದಿರುವ, ಹುಕ್ಕೇರಿ, ಅಂಗಡಿ ಕುಟುಂಬದವರನ್ನ ಶೇ ನೂರಕ್ಕೆ ನೂರಾ ಒಂದರಷ್ಟು ಗೆಲ್ಲಿಸಿಕೊಂಡು ಬರ್ತಿನಿ. ನನ್ನ ಮಗನ ಪರವಾಗಿ ಹೇಗೆಲ್ಲಾ ಓಡಾಡಿ ಕೆಲಸ ಮಾಡ್ತಿನೋ ಹಾಗೇ ಮಾಡ್ತೀನಿ ಎಂದಿದ್ಧಾರೆ. ಪ್ರಕಾಶ ಹುಕ್ಕೇರಿಯವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು ಪ್ರಕಾಶ ಹುಕ್ಕೇರಿ ಹಾಗೂ ಅವರ ಪುತ್ರ ಶಾಸಕ ಗಣೇಶ ಹುಕ್ಕೇರಿ ಬಿಜೆಪಿ ಸೇರ್ತಾರಾ ಎಂಬ ಪ್ರಶ್ನೆ ಎದುರಾಗಿದೆ. ಕಾಂಗ್ರೆಸ್ ನಾಯಕರು ಪ್ರಕಾಶ ಹುಕ್ಕೇರಿ ಕುಟುಂಬನ್ನ ಕಡೆಗಣಿಸುತ್ತಿರುವುದೇ ಮೀಸೆ ಮಾವನ ಕೋಪಕ್ಕೆ ಕಾರಣವಾಗಿದೆ ಎನ್ನಲಾಗಿದೆ.

error: Content is protected !!