ಬೆಂಗಳೂರು: ಯುವ ರಾಜಕಾರಣಿ, ದೈತ್ಯ ಸಂಹಾರಿ ಪ್ರದೀಪ್ ಈಶ್ವರ್ ಈಗಲೂ ಸುದ್ದಿಯಲ್ಲಿದ್ದಾರೆ. ತಮ್ಮ ಪರಿಶ್ರಮ ಅಕಾಡೆಮಿಯ ಮೂಲಕ ಪ್ರತಿವರ್ಷ ವೈದ್ಯರನ್ನು ರಾಜ್ಯಕ್ಕೆ ನೀಡುತ್ತಾ ಸುದ್ದಿಯಲ್ಲಿದ್ದ ಅವರು ವಿಧಾನಸಭಾ ಚುನಾವಣೆ 2023 ರಲ್ಲಿ ಬಿಜೆಪಿಯ ಹೆವಿವೇಟ್ ಡಾ ಕೆ ಸುಧಾಕರ್ ಅವರು ತಮ್ಮ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ.
ಕಾರ್ಯಕ್ರಮ ಒಂದರಲ್ಲಿ ಅವರು, ತಮ್ಮ ಬದುಕು, ಭವಿಷ್ಯ, ಶಾಸಕನಾಗಿ ಮಾಡಬೇಕಿರುವ ಕೆಲಸಗಳು, ಅವರ ಮುಂದಿರುವ ಸವಾಲುಗಳು, ಜನರ ಟೀಕೆ, ಸುಧಾಕರ್ ಜೊತೆ ಮೊದಲು ಮತ್ತು ಈಗಿನ ಸಂಬಂಧ, ರಾಜಕೀಯಕ್ಕೆ ಬರಲಿಚ್ಛಿಸುವ ತರುಣರು ಮಾಡಿಕೊಳ್ಳಬೇಕಾಗದ ಸಿದ್ಧತೆಗಳು-ಮೊದಲಾದ ಹಲವಾರು ಸಂಗತಿಗಳ ಬಗ್ಗೆ ವಿವರವಾಗಿ ಮಾತಾಡಿದ್ದಾರೆ. ಶಾಸಕನಾಗಿ ಬದುಕಿನ ಮತ್ತೊಂದು ಮಜಲನ್ನು ಪ್ರವೇಶಿಸಿರುವ ಪ್ರದೀಪ್ ಅದನ್ನು ಎಂಜಾಯ್ ಮಾಡುತ್ತಿದ್ದಾರೆ. ಅವರಲ್ಲಿರುವ ಆತ್ಮವಿಶ್ವಾಸ ದಿಗಿಲು ಮೂಡಿಸುತ್ತದೆ.