ಬಸ್ ಫೈಲ್ಯೂರ್ ಆಗಿ ಬಸ್ ನದಿ ದಡದಲ್ಲಿ ಪಲ್ಟಿಯಾದ ಘಟನೆಯು ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ಸಂಭವಿಸಿದೆ. ಬಸ್ಸಿನಲ್ಲಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸರು ಸೇರಿ ಒಟ್ಟು 39 ಮಂದಿ ಪ್ರಯಾಣಿಕರು ಇದ್ದರು. ದುರ್ಘಟನೆಯಲ್ಲಿ ಆರು ಮಂದಿ ಯೋಧರು ಸಾವನ್ನಪ್ಪಿದ್ದಾರೆ. ಎಂದು ವರದಿಯಾಗಿದೆ.
ವರದಿಗಳ ಪ್ರಕಾರ ಬಸ್ಸಿನಲ್ಲಿ 37 ಐಟಿಬಿಪಿ ಯೋಧರು ಮತ್ತು ಇಬ್ಬರು ಪೊಲೀಸ್ ಅಧಿಕಾರಿಗಳು ಇದ್ದರು. ಘಟನಾಸ್ಥಳಕ್ಕೆ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಭೇಟಿ ನೀಡಿದ್ದಾರೆ. ರಕ್ಷಣಾ ಕಾರ್ಯ ಚುರುಕುಗೊಂಡಿದ್ದು, ಸಾವು-ನೋವಿನ ಆತಂಕ ಹೆಚ್ಚಾಗಿದೆ