ಕೂಗು ನಿಮ್ಮದು ಧ್ವನಿ ನಮ್ಮದು

ಮುಂಜ್ ಮುಂಜಾನೆ ಜಾಲಿ ರೈಡ್ ಬಂದವರಿಗೆ ಶಾಕ್, ಐಶಾರಾಮಿ ಕಾರು, ಬೈಕ್ ವಶ

ಬೆಂಗಳೂರು: ಮುಂಜಾನೆ ಜಾಲಿ ರೈಡ್ ಬರುತ್ತಿರುವವರಿಗೆ ಪೊಲೀಸರು ಶಾಕ್ ನೀಡಿದ್ರು. ಇನ್ನೂ ನೆಲಮಂಗಲ ತಾಲೂಕಿನ ಯಂಟ ಗಾನಹಳ್ಳಿ ಟೋಲ್ ಹತ್ತಿರ ೪೦ಕ್ಕೂ ಹೆಚ್ಚು ಬೈಕ್ಗಳನ್ನು ಮತ್ತು ಕಾರುಗಳನ್ನು ಪೋಲಿಸರು ತಮ್ಮ ವಶಕ್ಕೆ ಪಡೆದಿದ್ದಾರೆ. ಜೊತೆಗೆ ಈ ಐಶಾರಾಮಿ ಕಾರು ಮತ್ತು ಬೈಕ್ ಸವಾರರು ತಮ್ಮ ವಾಹನವನ್ನು ಸೈಲೆನ್ಸರ್ ಮಾರ್ಪಾಡು ಮಾಡಿಕೊಂಡು ಮಂಗಳೂರು, ನೆಲಮಂಗಲ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನವನ್ನು ಓಡಿಸುತ್ತಿದ್ದರು.

ಇನ್ನೂ ಅತಿಯಾದ ಸೌಂಡ್ ಮತ್ತು ವಾಯು ಮಾಲಿನ್ಯ ಆಗುವ ಹಿನ್ನೆಲೆ ಖಚಿತವಾದ ಮಾಹಿತಿಯ ಮೇರೆಗೆ ದಾಳಿ ಮಾಡಿರುವ RTO ಅಧಿಕಾರಿಗಳು ಕಾರ್ಯಚರಣೆಯನ್ನು ಮಾಡಿ ಬೈಕ್ ಮತ್ತು ಕಾರುಗಳನ್ನು ಪೋಲಿಸರು ತಮ್ಮ ವಶಕ್ಕೆ ಪಡೆಯುತ್ತಿದ್ದಾರೆ. ಜೊತೆಗೆ ವಶಕ್ಕೆ ಪಡೆದಿರುವ ಐಶಾರಾಮಿ ಬೈಕ್ ಮತ್ತು ಕಾರುಗಳನ್ನು ಉದ್ಯಮಿ ಮತ್ತು ರಾಜಕೀಯ ನಾಯಕರ ಮಕ್ಕಳಿಗೆ ಸೇರಿದ್ದು ಎಂಬ ಮಾಹಿತಿಯು ಲಭ್ಯವಾಗಿದೆ. ಇನ್ನೂ ಮೇಲಾಧಿಕಾರಿಗಳ ಒತ್ತಡದಿಂದಾಗಿ ವಶಕ್ಕೆ ಪಡೆದಿರಿವ ವಾಹನಗಳನ್ನು ಬಿಡಲಾಗಿದೆ ಎನ್ನಲಾಗುತ್ತದೆ.

error: Content is protected !!