ನ್ಯುಮೋನಿಯಾ: ಶ್ವಾಸಕೋಶಗಳಿಗೆ ಉರಿಯೂತ ತಗುಲಿದಾಗ, ಅವುಗಳಲ್ಲಿ ಉರಿಯೂತ ದ್ರವ ಸಂಗ್ರಹಗೊಂಡು ಆ ಭಾಗ ಬಿರುಸಾಗುತ್ತದೆ. ಈ ಸನ್ನಿವೇಶವನ್ನು ನ್ಯೂಮೊನಿಯಾ ಎನ್ನುತ್ತಾರೆ.ಶ್ವಾಸಕೋಶಗಳನ್ನು ಆಕ್ರಮಿಸುವ ಬ್ಯಾಕ್ಟೀರಿಯಾ ಮತ್ತು ವೈರಸ್ ಸೋಂಕು ಜೀವಿಗಳು ನ್ಯುಮೊನಿಯಾಕ್ಕೆ ಮುಖ್ಯ ಕಾರಣ ಎಂದು ಹೇಳಲಾಗಿದೆ.
ರಾಸಾಯನಿಕ ವಸ್ತುಗಳು, ವಿಕಿರಣ ಹಾಗೂ ಅಣಬೆ
ಜೀವಿಗಳು ನ್ಯುಮೋನಿಯಾಕ್ಕೆ ಎಡೆಮಾಡಿಕೊಡಬಲ್ಲವು. ಉರಿಯೂತಕ್ಕೊಳಗಾದ ಭಾಗದಲ್ಲಿ ಕೆಂಪು ಅಥವಾ ಬಿಳಿ ರಕ್ತ ಕಣಗಳು ಮತ್ತು ಉರಿಯೂತ ದ್ರವ ಶೇಖರಣೆಯಾಗುತ್ತದೆ. ಇದರಿಂದ ಉರಿಯೂತಕ್ಕೊಳಗಾದ ಶ್ವಾಸಕೋಶದ ಭಾಗ ಗಾಳಿ ಕಳೆದುಕೊಂಡು ಗಟ್ಟಿಯಾಗುತ್ತದೆ.ಈ ಉರಿಯೂತ ಹಲವಾರು ಕಾರಣಗಳಿಂದಾಗಿರಬಹುದು ನ್ಯುಮೊನಿಯಾ ಯಾವುದಾದರೂ ಒಂದು ಶ್ವಾಸಕೋಶಕ್ಕೆ ತಗುಲಬಹುದು. ಒಂದು ಶ್ವಾಸಕೋಶದ ಯಾವುದಾದರೋಂದು ಹಾಲಿಗೆ ಅಥವಾ ಖಂಡಕ್ಕೆ ತಗುಲಬಹುದು .ಇದರಲ್ಲಿ ಜ್ವರ ಮತ್ತು ಚಳಿ ರೋಗದ ಪ್ರಧಾನ ತೊಂದರೆಗಳು. ಕೆಮ್ಮು, ಕಫ ಇದರ ಅನ್ಯ ಲಕ್ಷಣಗಳು. ರೋಗಿ ತೇಕುತ್ತ ಉಸಿರಾಡುತ್ತಾನೆ .ವ್ಯಾಕುಲತೆಯ ಅನುಭವ ಮಾಡುತ್ತಾನೆ. ಇಂಥ ಸ್ಥಿತಿಯಲ್ಲಿ ಈ ಕೆಳಗಿನ ಉಪಚಾರ ಮಾಡಿ.
೧) ಎಂಟು ಹತ್ತು ಬೇವಿನ ಎಲೆಗಳಿಂದ ಕಷಾಯವನ್ನು ತಯಾರಿಸಿ, ಅದನ್ನು ಸೋಸಿ, ಅದರಲ್ಲಿ ಎರಡು ಚಮಚ ಜೇನು ತುಪ್ಪವನ್ನು ಸೇರಿಸಿ, ಸೇವಿಸಲು ನೀಡಿ.
೨) ಜೇನುತುಪ್ಪದಲ್ಲಿ ಅರಳಿ ವೃಕ್ಷದ ತೊಗಟೆಯ ಚೂರ್ಣವನ್ನು ಸೇರಿಸಿ,ನೆಕ್ಕುವುದರಿಂದ ಶಮನ ಉಂಟಾಗುತ್ತದೆ.
೩) ಜೇನುತುಪ್ಪದಲ್ಲಿ ಹಾಗಲ ಬಳ್ಳಿಯ ಎಲೆಯ ರಸವನ್ನು ಸೇರಿಸಿ ನೆಕ್ಕಿ.
೪) ಅರ್ಧ ಚಮಚ ಅಜವ್ವಾನವನ್ನು ಜೇನು ತುಪ್ಪದೊಡನೆ ಸೇವಿಸಿ.