ನವದೆಹಲಿ: ‘ರಾಷ್ಟ್ರ ಮೊದಲು, ಯಾವಾಗಲೂ ಮೊದಲು’ ಎನ್ನುವ ಮಂತ್ರದೊಂದಿಗೆ ದೇಶವು ಮುನ್ನಡೆಯಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳಿದ್ದಾರೆ.
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿಂದು ಪ್ರಧಾನಿ ಮೋದಿಯವರು 75ನೇ ವರ್ಷದ ಸ್ವಾತಂತ್ರ್ಯೋತ್ಸವದ ಆಚರಣೆ ಕುರಿತಂತೆ ಮಾತನಾಡಿದರು. ಮಹಾತ್ಮ ಗಾಂಧೀಜಿ ಅವರು ‘ಭಾರತ ಚೋಡೊ ಆಂದೋಲನ’(ಭಾರತ ಬಿಟ್ಟು ತೊಲಗಿ) ಆರಂಭಿಸಿದ್ದರು. ಅದೇ ರೀತಿಯ ವಿಭಿನ್ನವಾದ ಚಳವಳಿ ಈಗಿನ ಸಂದರ್ಭದಲ್ಲಿ ಅಗತ್ಯವಿದೆ. ಪ್ರತಿಯೊಬ್ಬ ಭಾರತೀಯ ‘ಭಾರತ ಜೋಡೊ ಆಂದೋಲನ’ (ಭಾರತ ಜೋಡಿಸಿ ಆಂದೋಲನ) ಆರಂಭಿಸಬೇಕು ಎಂದು ಸಲಹೆ ನೀಡಿದ್ದಾರೆ.