ಬ್ಯೂಟಿ ಟಿಪ್ಸ್ : ಸುಂದರವಾಗಿ ಕಾಣಲು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಪ್ರತಿಯೊಬ್ಬರಿಗೂ ತಾನು ಆಕರ್ಷಕವಾಗಿ ಕಾಣಬೇಕು, ತನ್ನ ಮುಖ ನೋಡಿ ಯಾರೂ ಮೊಳ ಹಾಕಬಾರದು ಅಂತಾ ಅಂದುಕೊಂಡಿರುತ್ತಾರೆ. ಆದರೆ ಅನೇಕ ಜನರ ಮುಖದ ಮೇಲಿನ ಗುರುತುಗಳು ಅವರ ಸೌಂದರ್ಯವನ್ನು ಹಾಳುಮಾಡುತ್ತವೆ.
ಹಣೆಯ ಮೇಲಿನ ಸಣ್ಣ ಸಣ್ಣ ಮೊಡವೆಗಳಿಂದ ಅನೇಕರು ಕಿರಿಕಿರಿ ಅನುಭವಿಸುತ್ತಾರೆ. ಸೌಂದರ್ಯಕ್ಕೆ ಕುತ್ತು ತರುವ ಈ ಮೊಡವೆಗಳನ್ನು ಹೇಗಪ್ಪಾ ಹೋಗಲಾಡಿಸುವುದು ಅನ್ನೋದೇ ಅನೇಕರಿಗೆ ಚಿಂತೆಯಾಗಿರುತ್ತದೆ. ನಿಮ್ಮ ಹಣೆಯ ಮೇಲೂ ಈ ರೀತಿಯ ಮೊಡವೆ ಗುರುತುಗಳಿದ್ದರೆ ಅವುಗಳನ್ನು ಹೊಗಲಾಡಿಸಲು ಇಲ್ಲಿವೆ ನೋಡಿ ಪವರ್ ಫುಲ್ ಮನೆಮದ್ದುಗಳು. ಈ ಸರಳ ಮನೆಮದ್ದುಗಳಿಂದ ನಿಮ್ಮ ಮೊಡವೆ ಸಮಸ್ಯೆಗಳಿಗೆ ಮುಕ್ತಿ ನೀಡಬಹುದು. ಮೊಡವೆಗಳಿಗೆ ಸರಳ ಮನೆಮದ್ದುಗಳು
ನಾವು ಸಾಮಾನ್ಯವಾಗಿ ಅಲೋವೆರಾವನ್ನು ಬೇರೆ ಬೇರೆ ರೀತಿಯಲ್ಲಿ ಉಪಯೋಗಿಸುತ್ತಿರುತ್ತೇವೆ. ಇದನ್ನು ಹಣೆಗೆ ಹಚ್ಚಿಕೊಂಡರೆ ತುಂಬಾ ಪ್ರಯೋಜನವಾಗುತ್ತದೆ. ಹಣೆಯ ಮೇಲಿನ ಮೊಡವೆಗಳಂತಹ ಗುರುತುಗಳು ಕೆಲವೇ ದಿನಗಳಲ್ಲಿ ಮಾಯವಾಗುತ್ತವೆ. ಅಲೋವೆರಾ ತುಂಬಾ ಪ್ರಯೋಜನಕಾರಿಯಾಗಿದ್ದು, ಇದನ್ನು ಹಚ್ಚಿಕೊಂಡರೆ ಹಣೆಯ ಮೇಲಿನ ಗುರುತುಗಳನ್ನು ತೆಗೆದುಹಾಕಬಹುದು.
ಕೆಲವು ಹನಿ ಟೀ ಟ್ರೀ ಆಯಿಲ್ ಅನ್ನು ನೀರಿನಲ್ಲಿ ಬೆರೆಸಿ ಹತ್ತಿಯ ಸಹಾಯದಿಂದ ಹಣೆಯ ಮೇಲೆ ಹಚ್ಚಿ. ಇದು ಖಂಡಿತವಾಗಿಯೂ ನಿಮಗೆ ಸಹಕಾರಿಯಾಗುತ್ತದೆ. ಈ ಅಭ್ಯಾಸವವನ್ನು ರೂಢಿಸಿಕೊಂಡರೆ ನಿಮ್ಮ ಮುಖದ ಸೌಂದರ್ಯ ಫಳಫಳನೆ ಹೊಳೆಯುತ್ತದೆ. ಮೊಡವೆಗಳಿಗೆ ಮುಕ್ತಿ ನೀಡಲು ನಿಂಬೆ ಕೂಡ ತುಂಬಾ ಪ್ರಯೋಜನಕಾರಿಯಾಗಿದೆ. ಇದರ ರಸದ ಕೆಲವು ಹನಿಗಳನ್ನು ನೇರವಾಗಿ ಹಣೆಯ ಮೇಲೆ ಲೇಪಿಸಿದರೆ, ನೀವು ಖಂಡಿತ ಪ್ರಯೋಜನ ಪಡೆಯುತ್ತೀರಿ. ಕೇವಲ 5 ನಿಮಿಷಗಳಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ.
ಕಲ್ಲಂಗಡಿ ಹಣ್ಣನ್ನು ರಾತ್ರಿ ಮಲಗುವ ಮುನ್ನ ಹಣೆಯ ಮೇಲೆ ಹಚ್ಚಿ ಮತ್ತು ಬೆಳಿಗ್ಗೆ ಎದ್ದ ನಂತರ ನೀರಿನಿಂದ ತೊಳೆಯಿರಿ. ಇದರಿಂದ ನಿಮ್ಮ ಮೊಡವೆಗಳೂ ಮಾಯವಾಗುತ್ತವೆ ಮತ್ತು ತ್ವಚೆಯೂ ಮೃದುವಾಗುತ್ತದೆ.
ಬೇಳೆ ಹಿಟ್ಟು ಮತ್ತು ಬಾದಾಮಿ ಪುಡಿಯನ್ನು ಸಮಾನ ಪ್ರಮಾಣದಲ್ಲಿ ತೆಗೆದುಕೊಂಡು, ಒಂದು ಚಿಟಿಕೆ ಅರಿಶಿನ ಸೇರಿಸಿ ಮತ್ತು ನೀರನ್ನು ಸೇರಿಸಿ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ಹಣೆಯ ಮೇಲೆ 15 ನಿಮಿಷಗಳ ಕಾಲ ಹಚ್ಚಿದ ನಂತರ ತೊಳೆಯಿರಿ. ಇದು ನಿಮ್ಮ ಹಣೆಯ ಮೇಲೆ ಬೀಳುವ ಮೊಡವೆಗಳನ್ನು ಕಡಿಮೆ ಮಾಡುತ್ತದೆ. ಇದರೊಂದಿಗೆ ವಾರಕ್ಕೊಮ್ಮೆ ಸ್ಕ್ರಬ್ ಸಹಾಯದಿಂದ ಮುಖವನ್ನು ಎಫ್ಫೋಲಿಯೇಟ್ ಮಾಡಿ. ಇದರಿಂದ ನಿಮಗೆ ಖಂಡಿತ ಲಾಭವಾಗಲಿದೆ.