ಮೂರು ತಿಂಗಳ ನಂತರ ತರೆಯಲಿರುವ ಪ್ರೇಮಿಗಳ ಸ್ವರ್ಗದ ಬಾಗಿಲು .
ನಂದಿಬೆಟ್ಟದಲ್ಲಿ ಮುಂದುವರೆದ ವೀಕೆಂಡ್ ನಿರ್ಬಂಧ
ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಸುರಿದ ಬಾರಿ ಮಳೆಗೆ ಚಿಕ್ಕಬಳ್ಳಾಪುರ ಜಿಲ್ಲೆ ಅಕ್ಷರಶಃ ತತ್ತರಿಸಿ ಹೋಗಿತ್ತು, ಅದೆಷ್ಟೋ ಜನ ಮನೆಗಳನ್ನು ಕಳೆದುಕೊಂಡ್ರು, ಕೋಟ್ಯಾಂತರ ರೂಪಾಯಿ ಬೆಳೆ ನಾಶವಾಗಿ ರೈತರ ಬದುಕು ನೆಲಕಚ್ಚಿದೆ. ಇದರ ಜೊತೆಗೆ ವಿಶ್ವ ವಿಖ್ಯಾತ ಈ ಬೆಟ್ಟಕ್ಕೂ ವರುಣನ ಹೊಡೆತ ಬಿದ್ದಿತ್ತು. ಗುಡ್ಡ ಕುಸಿದು ರಸ್ತೆ ಕೊಚ್ಚಿಹೋದ ಮೂರು ತಿಂಗಳ ನಂತರ ಮತ್ತೆ ಈ ಬೆಟ್ಟ ಪ್ರವೇಶಕ್ಕೆ ಓಫನ್ ಆಗ್ತಾ ಇದ್ದು, ಪ್ರವಾಸಿಗರಿಗೆ ಸಂತಸ ತಂದಿದೆ. ಈ ಸ್ಟೋರಿ ಇಲ್ಲಿದೆ ನೋಡಿ.
ಎರಡು ವರ್ಷಗಳಿಂದ ಕೊರೋನ ಲಾಕ್ ಡೌನ್.. ಅದು ಇದೂ ಅಂತ ನಿರ್ಬಂಧಗಳ ಮೇಲೆ ನಿರ್ಬಂಧ. ಹೀಗಾಗಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ವಿಶ್ವವಿಖ್ಯಾತ ನಂದಿ ಗಿರಿಧಾಮಕ್ಕೆ ಜಿಲ್ಲಾಡಳಿತ ನಿರ್ಬಂದ ಹೇರುತ್ತಲೇ ಬಂದಿತ್ತು. ಇಷ್ಟೇ ಅಲ್ಲದೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಬಾರಿ ಮಳೆಗೆ ನಂದಿ ಬೆಟ್ಟದಲ್ಲಿ ಬಾರಿ ಪ್ರಮಾಣದ ಗುಡ್ಡ ಕುಸಿದು ರಸ್ತೆ ಕೊಚ್ಚಿಹೋಗಿತ್ತು. ಇದರಿಂದ ಜಿಲ್ಲಾಡಳಿತ ಪ್ರವಾಸಿಗರಿಗೆ ನಂದಿಗಿರಿಧಾಮ ಪ್ರವೇಶಕ್ಕೆ ನಿರ್ಬಂಧ ಹೇರಿತ್ತು. ಗಿರಿಧಾಮಕ್ಕೆ ಸಂಪರ್ಕಿಸುವ ರಸ್ತೆಗೆ ಎಂಬತ್ತು ಲಕ್ಷ ಖರ್ಚು ಮಾಡಿ ಹೊಸ ತಂತ್ರಜ್ಞಾನ ಉಪಯೋಗಿಸಿ ಬ್ರಿಡ್ಜ್ ಕಾಮಾಗಾರಿಯನ್ನು ಪೂರ್ಣಗೊಳಿಸಿ, ಇಂದು ಬುಧವಾರದಿಂದ ಪ್ರವಾಸಿಗರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಇನ್ನು ಇದೇ ವೇಳೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ ಅಧಿಕಾರಿಗಳೊಂದಿಗೆ ನಿನ್ನೆ ನಂದಿ ಬೆಟ್ಟದ ಬ್ರಿಡ್ಜ್ ಗುಣಮಟ್ಟದ ಪರಿಶೀಲನೆ ಮಾಡಿ. ನಂತರ ಮಾತನಾಡಿದ ಅವರು ಪ್ರವಾಸಿಗರ ನಂದಿಗಿರಿಧಾಮ ಪ್ರವೇಶಕ್ಕೆ ಎಲ್ಲಾ ರೀತಿಯ ಮುಂಜಾಗ್ರತ ಕ್ರಮ ಕೈಗೊಂಡಿದ್ದು, ಪ್ರತಿ ಶನಿವಾರ ಮತ್ತು ಭಾನುವಾರ ನಂದಿಬೆಟ್ಟದ ಪ್ರವೇಶಕ್ಕೆ ತಾತ್ಕಾಲಿಕವಾಗಿ ನಿರ್ಬಂಧ ಹೇರಲಾಗಿದೆ ಎಂದರು.
ಇನ್ನು ನಂದಿ ಬೆಟ್ಟಕ್ಕೆ ಬರುವ ಪ್ರವಾಸಿಗರನ್ನೇ ನಂಬಿ ಜೀವನ ಸಾಗಿಸುತ್ತಿದ್ದ ರಸ್ತೆ ಬದಿ ವ್ಯಾಪಾರಿಗಳು, ಸಣ್ಣ ಪುಟ್ಟ ಅಂಗಡಿಗಳ ಮಾಲೀಕರು, ಹೋಟೆಲ್ ಉದ್ದಿಮೆಗಳು, ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿ ಮಲಗುವಂತಾಗಿತ್ತು. ಮೂರು ತಿಂಗಳ ನಂತರ ಪ್ರವಾಸಿಗರಿಗೆ ನಂದಿ ಬೆಟ್ಟದ ಪ್ರವೇಶಕ್ಕೆ ಅವಕಾಶಕ್ಕೆ ಜಿಲ್ಲಾಡಳಿತ ಗ್ರೀನ್ ಸಿಗ್ನಲ್ ನೀಡಿದ್ದು, ಸಣ್ಣಪುಟ್ಟ ವ್ಯಾಪಾರಿಗಳಿಗೆ ಫುಲ್ ಖಷಿಯಾಗಿದೆ. ಇಷ್ಟು ದಿವಸ ಮುಚ್ಚಿದ್ದ ಅಂಗಡಿಗಳು, ಹೋಟೆಲ್ ಗಳು ಇಂದಿನಿಂದ ಓಪನ್ ಮಾಡಲು ತಯಾರಿ ನಡೆಸಿದ್ದಾರೆ. ಇತ್ತ ಮುಂಜಾಗ್ರತೆ ಕ್ರಮವಾಗಿ ಪೊಲೀಸ್ ಇಲಾಖೆ ಪ್ರವಾಸಿಗರ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ಕೋವಿಡ್ ನಿಯಮಗಳನ್ನು ಪಾಲಿಸಲು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಕಡಕ್ ಎಚ್ಚರಿಕೆ ನೀಡಿದ್ದಾರೆ.
ಒಟ್ಟಿನಲ್ಲಿ ಮೂರು ತಿಂಗಳ ನಂತರ ಪ್ರೇಮಿಗಳ ಸ್ವರ್ಗದ ಬಾಗಿಲು ತೆರೆಯಲಿದ್ದು, ಇಂದಿನಿಂದ ಜಗತ್ಪ್ರಸಿದ್ದ ನಂದಿ ಹಿಲ್ಸ್ ಕಲರ್ ಫುಲ್ ಆಗಿರುತ್ತದೆ. ಹೆಚ್ವಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ಸಾದ್ಯತೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಆದರೆ ವೀಕೆಂಡ್ ನಿರ್ಬಂದ ಹೇರಿರುವುದು ಉದ್ಯೋಗಸ್ಥ ಪ್ರೇಮಿಗಳಿಗೆ ಡಿಸ್ ಆಪಾಯಿಂಟ್ ಆಗಿರೋದಂತೂ ಸುಳ್ಳಲ್ಲ.
News90 Karnataka, ಚಿಕ್ಕಬಳ್ಳಾಪುರ