ಛತ್ತಾರಪುರ: ಆನ್ ಲೈನ್ ಆಟವಾಡಿ ೪೦ ಸಾವಿರ ರೂಪಾಯಿಗಳನ್ನು ಕಳೇದುಕೊಂಡಿದ್ದಕ್ಕೆ ಬೇಜಾರ ಆಗಿ ೧೩ ವರ್ಷದ ಯುವಕ ಒಬ್ಬ ಆತ್ಮಹತ್ಯೆಯನ್ನು ಮಾಡಿಕೊಂಡಿರುವ ಘಟನೆಯು ಛತ್ತಾರಪುರ ನಗರದಲ್ಲಿ ಶುಕ್ರವಾರದಂದು ಸಂಭವಿಸಿದೆ. ಪ್ರೈವೇಟ್ ಶಾಲೆಯೊಂದರಲ್ಲಿ ೬ನೇ ತರಗತಿಯಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿರುವ ಬಾಲಕನೊಬ್ಬ ಆತ್ಮಹತ್ಯೆಯ ಮುಂಚಿತವಾಗಿ ಪತ್ರ ಒಂದನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನೂ ಪತ್ರದಲ್ಲಿ, ನಾನು ಫ್ರೀ ಪೈರ್ ಗೇಮ್ ಆಡಿ ೪೦ ಸಾವಿರ ರೂಪಾಯಿಗಳನ್ನು ಕಳೇದುಕೊಂಡಿದ್ದೆನೆ ದಯವಿಟ್ಟು ಎಲ್ಲರೂ ನನ್ನನ್ನು ಕ್ಷಮಿಸಿ ಎಂದು ಪತ್ರದಲ್ಲಿ ಬರೇದ್ದಿದ್ದಾನೆಂದು ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ DSP ಶಶಾಂಕ್ ಜೈನ್ ಹೇಳಿದ್ದಾರೆ.
ಇನ್ನೂ ಈ ಯುವಕನ ತಂದೆ ಪ್ಯಾಥಾಲಜಿ ಲ್ಯಾಬ್ ನಡೇಸುತ್ತಾರೆ. ಜೊತೆಗೆ ತಾಯಿ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಈ ಯುವಕ ಆನ್ ಲೈನ್ ಆಟವಾಡಲು ತನ್ನ ತಾಯಿಯ ಖಾತೆಯಿಂದ ನಲವತ್ತು ಸಾವಿರ ರೂಪಾಯಿ ಹಣವನ್ನು ತೇಗೆದುಕೊಂಡಿದ್ದಾನೆ. ಇನ್ನೂ ಯುವಕ ಹಣವನ್ನು ಪಡೇದ ನಂತರ ತಾಯಿಯ ಮೊಬೈಲ್ ಪೋನ್ ಗೆ ಮೆಸೇಜ್ ಬಂದಿದೆ. ಆಗ ತಾಯಿ ಅವರ ಮಗನನ್ನು ಬೈದಿದ್ದಾರೆ. ಆಗ ಇದರಿಂದಾಗಿ ಬೇಸತ್ತ ಹುಡುಗ ಯಾರು ಇಲ್ಲದ ಸಮಯದಲ್ಲಿ ಮನೆಯ ರೂಮ್ ಒಂದರಲ್ಲಿ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾನೆಂದು ಪೋಲಿಸರು ತಿಳಿಸಿದ್ದಾರೆ.