ಕೂಗು ನಿಮ್ಮದು ಧ್ವನಿ ನಮ್ಮದು

ಒಮಿಕ್ರಾನ್ ಪ್ರಕರಣ ಏರಿಕೆ ಬೆನ್ನಲ್ಲೇ ಆರೋಗ್ಯ ಸಚಿವರ ಸಭೆ, ಮಾಸ್ಕ್ ನಿಯಮ ಜಾರಿಗೆ ಸಿದ್ಧತೆ!

ನವದೆಹಲಿ: ಭಾರತದಲ್ಲಿ ಕೊರೋನಾ ಪ್ರಕರಣ ಸಂಖ್ಯೆ ಏರಿಕೆಯಾಗುತ್ತಿದೆ. ಮಹಾರಾಷ್ಟ್ರದಲ್ಲಿ ಪ್ರಕರಣಗಳು ಶೇಕಡಾ 17.1 ರಷ್ಟು ಏರಿಕೆಯಾಗಿದೆ. ಇನ್ನು ಒಮಿಕ್ರಾನ್ ಉಪತಳಿ ಪ್ರಕರಣಗಳು ಗಣನೀಯ ಹೆಚ್ಚಳವಾಗಿದೆ. ಗುಜಾರಾತ್ ಬಯೋಟೆಕ್ನಾಲಜಿ ಸಂಶೋಧನಾ ಕೇಂದ್ರದಲ್ಲಿ ಒಮಿಕ್ರಾನ್ BA.7 ಹಾಗೂ BA.5.1.7 ತಳಿ ಪತ್ತೆಯಾಗಿದೆ. ಭಾರತದಲ್ಲಿ ಮೊದಲ ಒಮಿಕ್ರಾನ್ ಉಪತಳಿ BQ.1 ಪ್ರಕರಣ ಪತ್ತೆಯಾಗಿದೆ. ಆತಂಕಕಾರಿ ಬೆಳವಣಿ ಬೆನ್ನಲ್ಲೇ ಕೇಂದ್ರ ಆರೋಗ್ಯ ಸಚಿವ ಮನ್ಸುಕ್ ಮಾಂಡವಿಯಾ ತುರ್ತು ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ICMR) ನಿರ್ದೇಶಕ ರಾಜೀವ್ ಬಹ್ಲ್, ನೀತಿ ಆಯೋಗದ ಆರೋಗ್ಯ ಸದಸ್ಯ ವಿಕೆ ಪೌಲ್, ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು (ಎನ್‌ಟಿಜಿಐ) ಅಧ್ಯಕ್ಷರು ಸೇರಿದಂತೆ ಹಲವು ಅಧಿಕಾರಿಗಳು ಪಾಲ್ಗೊಂಡಿದ್ದರು. ಸಭೆಯಲ್ಲಿ ಆರೋಗ್ಯ ತಜ್ಞ ಅಧಿಕಾರಿಗಳು ಮಾಸ್ಕ್ ಕಡ್ಡಾಯಗೊಳಿಸಲು ಸೂಚಿಸಿದ್ದಾರೆ.

ತುರ್ತು ಸಭೆಯಲ್ಲಿನ ಪ್ರಮುಖ ಅಂಶ ಅಂದರೆ ಮಾಸ್ಕ್ ಕಡ್ಡಾಯ, ಸಾಮಾಜಿಕ ಅಂತರ ಪಾಲನೆ ಸೇರಿದಂತೆ ಕೋವಿಡ್ ಸಮಯದಲ್ಲಿ ನೀಡಿದ್ದ ಮಾರ್ಗಸೂಚಿಗಳ ಪಾಲನೆ ಅತೀ ಅಗತ್ಯವಾಗಿದೆ. ಮತ್ತೆ ಈ ನಿಯಮಗಳನ್ನು ಜಾರಿಗೊಳಿಸಬೇಕು. ಕಾರಣ ಸದ್ಯ ಒಮಿಕ್ರಾನ್ ಉಪತಳಿಗಳು ಏರಿಕೆಯ ಹಂತದಲ್ಲಿದೆ. ಹೀಗಾಗಿ ಈಗಲೇ ಮಾಸ್ಕ್ ಕಡ್ಡಾಯಗೊಳಿಸಿದರೆ ಹರಡುವಿಕೆ ಪ್ರಮಾಣ ಕಡಿಮೆಯಾಗಲಿದೆ ಎಂದು ಅಧಿಕಾರಿಗಳು ಸೂಚಿಸಿದ್ದಾರೆ.

ಸದ್ಯ ಭಾರತದಲ್ಲಿ ಕೋವಿಡ್ ಹಾಗೂ ಒಮಿಕ್ರಾನ್ ಪ್ರಕರಣಗಳು ನಿಯಂತ್ರಣದಲ್ಲಿದೆ. ಆದರೆ ಏರಿಕೆ ಪ್ರಮಾಣ ಆತಂಕ ತಂದಿದೆ. ಕ್ಷಿಪ್ರ ಗತಿಯಲ್ಲಿ ಏರಿಕೆ ಕಾಣುತ್ತಿರುವ ಕಾರಣ ಮತ್ತೊಂದು ಅಪಾಯ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಈಗಲೇ ಮುನ್ನಚ್ಚೆರಿಕೆ ವಹಿಸಲು ಸಭೆ ನಡೆಸಲಾಗಿದೆ. ಇದರಿಂದ ಮುಂಬರುವ ದಿನಗಳಲ್ಲಿ ಎದುರಾವ ಅಪಾಯವನ್ನು ದೂರ ಸರಿಸಬಹುದು ಎಂದು ಅಧಿಕಾರಿಗಳು ಸೂಚಿಸಿದ್ದರೆ.

ಚೀನಾದಲ್ಲಿ ಹುಟ್ಟಿಅಮೆರಿಕ, ಬ್ರಿಟನ್‌, ಆಸ್ಪ್ರೇಲಿಯಾ ಮತ್ತು ಬೆಲ್ಜಿಯಂನಲ್ಲಿ ಈಗಾಗಲೇ ಹಬ್ಬಿರುವ ಓಮಿಕ್ರೋನ್‌ನ ಹೊಸ ರೂಪಾಂತರಿ ಉಪತಳಿ ಬಿಎಫ್‌.7 ಇದೀಗ ಗುಜರಾತ್‌ನಲ್ಲಿಯೂ ಪತ್ತೆಯಾಗಿದೆ. ಆದರೆ ರಾಜ್ಯದಲ್ಲಿ ಕಳೆದ ಹತ್ತು ದಿನಗಳಿಂದ ರೂಪಾಂತರಿ ತಳಿ ಪತ್ತೆ ಪರೀಕ್ಷೆಯತ್ತ ಹೆಚ್ಚಿನ ನಿಗಾ ಇಡಲಾಗಿದ್ದು ಹೊಸ ರೂಪಾಂತರ ಪತ್ತೆಯಾಗಿಲ್ಲ ಎಂದು ರಾಜ್ಯ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ.ಎಂ.ಕೆ.ಸುದರ್ಶನ್‌ ತಿಳಿಸಿದ್ದಾರೆ.

1542 ಕೇಸು, 8 ಸಾವು: ಕೇಸು 6 ತಿಂಗ​ಳ ಕನಿ​ಷ್ಠ
ಮಂಗ​ಳ​ವಾರ ಮುಂಜಾನೆ 8 ಗಂಟೆಗೆ ಮುಕ್ತಾ​ಯ​ವಾದ 24 ಗಂಟೆ​ಗ​ಳಲ್ಲಿ ದೇಶದಲ್ಲಿ 1542 ಹೊಸ ಕೋವಿಡ್‌ ಪ್ರಕ​ರ​ಣ ದಾಖಲಾಗಿದ್ದು, 8 ಜನರು ಸಾವನ್ನಪ್ಪಿದ್ದಾರೆ. ಹೊಸ ಪ್ರಕರಣಗಳು ಕಳೆದ 6 ತಿಂಗಳಲೇ ಕನಿಷ್ಠ ಪ್ರಮಾಣವಾಗಿದೆ. ಇನ್ನು ಸಕ್ರಿಯ ಪ್ರಕ​ರ​ಣ​ಗಳ ಸಂಖ್ಯೆ 26,449 ಕ್ಕೆ ಏರಿ​ಕೆ​ಯಾ​ಗಿದೆ. ದೇಶ​ದಲ್ಲಿ ಈವ​ರೆಗೆ 4.46 ಕೋಟಿ ಕೋವಿಡ್‌ ಪ್ರಕ​ರ​ಣ ದಾಖ​ಲಾ​ಗಿ​ವೆ. ದೈನಂದಿನ ಪಾಸಿ​ಟಿ​ವಿ​ಟಿ ದರ 0.68 ರಷ್ಟಿದೆ. ಒಟ್ಟು 219.37 ಕೋಟಿ ಡೋಸ್‌ ಕೋವಿಡ್‌ ಲಸಿಕೆ ವಿತ​ರ​ಣೆ​ಯಾ​ಗಿ​ದೆ.

error: Content is protected !!