ಎಲೆಕ್ಟ್ರಿಕ್ ಬೈಕ್‌ಗಳ ಮೂಲಕ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ ಓಲಾ ಸಂಸ್ಥೆಯು ಇದೀಗ ಓಲಾ ಎಲೆಕ್ಟ್ರಿಕ್ ಕಾರುಗಳನ್ನೂ ಅನಾವರಣಗೊಳಿಸಿದೆ.
ಪೂರ್ತಿಯಾಗಿ ಗ್ಲಾಸ್ ರೂಫ್ ಹೊಂದಿರುವ ಈ ಕಾರು ಕೇವಲ ನಾಲ್ಕೇ ಸೆಕೆಂಡುಗಳಲ್ಲಿ ವೇಗವನ್ನು ಗಂಟೆಗೆ 100 ಕಿಲೋಮೀಟರ್ ಹೆಚ್ಚಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ ಎಂದು ಸಂಸ್ಥೆ ಹೇಳಿದೆ.
ಒಮ್ಮೆ ಕಾರು ಸಂಪೂರ್ಣ ಚಾರ್ಜ್ ಆದ್ರೆ 500 ಕಿಲೋಮೀಟರ್ ವರೆಗೂ ಸಾಗಬಲ್ಲದು ಎನ್ನುವುದು ಸಂಸ್ಥೆಯ ಮಾತು. ಈ ಕಾರಿನಲ್ಲಿ ವಿಶೇಷವಾಗಿ ಡ್ರೈವರ್ ಅಸಿಸ್ಟೆಂಟ್ ಇದ್ದು, ಕೀಲೆಸ್ ಆಪರೇಷನ್ ಇದೆ. ಸದ್ಯ ಕಾರು ಅಭಿವೃದ್ಧಿ ಹಂತದಲ್ಲಿದ್ದು, 2024ಕ್ಕೆ ಭಾರತದ ಮಾರುಕಟ್ಟೆಗೆ ಬರಲಿದೆ ಎಂದಿದ್ದಾರೆ ಸಂಸ್ಥೆಯ ಮುಖ್ಯಸ್ಥ ಭವೀಶ್ ಅಗರ್ವಾಲ್.