ದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ವಿವಿಧ ವಿಚಾರಗಳ ಬಗ್ಗೆ ವಿವರಿಸಿ ಕೊರೊನಾ ಜಾಗತಿಕ ಬಿಕ್ಕಟ್ಟಿನಿಂದ ಪರಿಣಾಮ ಉಂಟಾದ ವಿವಿಧ ವಲಯಗಳಿಗೆ 8 ಅಂಶಗಳ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.
- ಆರೋಗ್ಯ ವಲಯಕ್ಕೆ 50,000 ಕೋಟಿ ರೂಪಾಯಿ, ಇತರ ವಲಯಗಳಿಗೆ 60,000 ಸಾವಿರ ಕೋಟಿ ರೂಪಾಯಿ
- 1.5 ಲಕ್ಷ ಕೋಟಿ ರೂಪಾಯಿ ಹೆಚ್ಚುವರಿ ಮೊತ್ತ ಎಮರ್ಜೆನ್ಸಿ ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್
- ಮೈಕ್ರೋಫೈನಾನ್ಸ್ ಮೂಲಕ 25 ಲಕ್ಷ ಮಂದಿಗೆ ಒದಗಿಸುವ ವ್ಯಕ್ತಿಗಳಿಗೆ ಕ್ರೆಡಿಟ್ ಗ್ಯಾರಂಟಿ ಯೋಜನೆ ಮೂಲಕ ಸಾಲ ಒದಗಿಸಲಾಗುತ್ತದೆ.
- ಪ್ರವಾಸೋದ್ಯಮದ ಪುನರುತ್ಥಾನ: 11,000ಕ್ಕೂ ಹೆಚ್ಚಯ ನೋಂದಾಯಿತ ಪ್ರವಾಸಿ ಗೈಡ್ಗಳು/ಟ್ರಾವೆಲ್ ಮತ್ತು ಇತರ ಪ್ರವಾಸೋದ್ಯಮ ವಲಯದಲ್ಲಿ ತೊಡಗಿಕೊಂಡವರಿಗೆ ಒದಗಿಸಲಾಗುತ್ತದೆ.
- 5 ಲಕ್ಷ ಮಂದಿಗೆ ಉಚಿತ ವೀಸಾ ನೀಡುವ ಯೋಜನೆ.
- ಆತ್ಮನಿರ್ಭರ್ ಭಾರತ್ ರೋಜ್ಗಾರ್ ಯೋಜನಾ ವಿಸ್ತರಣೆ
- ಡಿಎಪಿ ಮತ್ತು ಪಿಅಂಡ್ಕೆ ಗೊಬ್ಬರದ ಮೇಲೆ ಹೆಚ್ಚುವರಿ ಸಬ್ಸಿಡಿ (ಈ ಹಿಂದೆ ಘೋಷಣೆ ಮಾಡಲಾಗಿತ್ತು)
- ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ವಿಸ್ತರಣೆ (PMGKAY) (ಈ ಹಿಂದೆ ಘೋಷಣೆ ಮಾಡಲಾಗಿತ್ತು)