ಕೂಗು ನಿಮ್ಮದು ಧ್ವನಿ ನಮ್ಮದು

ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಸ್ವಚ್ಛಭಾರತ್‌ ಇರಬಾರದಾ? ನಾವು ಶೌಚಾಲಯಕ್ಕೆ ಎಲ್ಲಿ ಹೋಗಬೇಕು? ನಿಖಿಲ್‌ ಕುಮಾರಸ್ವಾಮಿ

ದುಬಾರಿ ಟೋಲ್‌ ದರ ವಿರೋಧಿಸಿ ಜೆಡಿಎಸ್‌ನಿಂದ ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್‌ ವೇನಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ನಿಖಿಲ್‌ ಕುಮಾರಸ್ವಾಮಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಸ್ವಚ್ಛ ಭಾರತ್‌ ಬಗ್ಗೆ ಬಿಜೆಪಿಯವರು ಮಾತಾಡುತ್ತಾರೆ.

ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಸ್ವಚ್ಛ ಭಾರತ್‌ ಇರಬಾರದಾ? ಎಂದು ಪ್ರಶ್ನಿಸಿದ ನಿಖಿಲ್‌ ಕುಮಾರಸ್ವಾಮಿ. ಹೆದ್ದಾರಿಯಲ್ಲಿ ನಾವು ಶೌಚಾಲಯಕ್ಕೆ ಎಲ್ಲಿ ಹೋಗಬೇಕು? ಪ್ರಯಾಣಿಕರಿಗೆ ಸಾಕಷ್ಟು ಸಮಸ್ಯೆ ಎಂದು ಕೇಂದ್ರ ಸರ್ಕಾಕ್ಕೆ ವಾಗ್ದಾಳಿ. ಎಲ್ಲರೂ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿ ಇರುವುದಿಲ್ಲ. ಬಡವರು 270 ರೂ. ಟೋಲ್‌ ಹೇಗೆ ಕಟ್ಟಬೇಕು. ಸರ್ವೀಸ್‌ ರಸ್ತೆ ಅಗತ್ಯ ಇದೆ ಎಂದ ನಿಖಿಲ್‌.

error: Content is protected !!