ಬೆಂಗಳೂರು: ಟೋಕಿಯೊ ಓಲಂಪಿಕ್‍ನಲ್ಲಿ ಈಟಿ ಎಸೆತದಲ್ಲಿ ಚಿನ್ನದ ಪದಕವನ್ನು ಪಡೆದ ನೀರಜ್ ಛೋಪ್ರಾಗೆ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರಾದ ಡಾ. ನಾರಾಯಣಗೌಡ ಅವರು ಅಭಿನಂದನೆಯನ್ನು ಸಲ್ಲಿಸಿದ್ರು. ಇನ್ನೂ ಈ ಸಾಧನೆಗೆ ತರಬೇತಿಯನ್ನು ನೀಡಿರುವ ಶಿರಸಿಯ ಕಾಶಿನಾಥ್ ನಾಯ್ಕ್ ಅವರಿಗೂ ಕೂಡಾ ನಗದು ಬಹುಮಾನವನ್ನು ಘೋಷಿಸಿದ್ರು. ಇನ್ನೂ
ನೀರಜ್ ಛೋಪ್ರಾ ಅವರು ಚಿನ್ನದ ಪದಕವನ್ನು ಪಡೆದಿರುವುದರಲ್ಲಿ ಇನ್ನೊಬ್ಬ ಕನ್ನಡಿಗನ ಪಾತ್ರವೂ ಬಹಳ ಇದೆ. ಜೊತೆಗೆ ಛೋಪ್ರಾಗೆ ತರಬೇತಿಯನ್ನು ನೀಡಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಕಾಶಿನಾಥ್ ನಾಯ್ಕ್ ಎಂಬುವರು.
ಜೊತೆಗೆ ೨೦೧೦ ರಲ್ಲಿ ಕಾಮನ್ವೆಲ್ತ್ ಅಲ್ಲಿ ಕಾಶಿನಾಥ್ ಈಟಿ ಎಸೆತದಲ್ಲಿ ಕಂಚಿನ ಪದಕವನ್ನು ತೇಗೆದುಕೊಂಡಿದ್ದರು. ಇನ್ನೂ ಅತ್ಯುತ್ತಮ ಕ್ರೀಡಾ ಸಾಧಕ ಕಾಶಿನಾಥ್ ಗರಡಿಯಲ್ಲಿ ಪಳಗಿರುವಂತ ನೀರಜ್ ಅವರು, ಸ್ವರ್ಣ ಪದಕವನ್ನು ಗಳಿಸಿ ದೇಶದ ಗೌರವವನ್ನು ಹೆಚ್ಚಿಸಿದ್ರು. ಇನ್ನೂ ಇಂತಹ ಸಾಧನೆಗೆ ಬೆನ್ನೆಲುಬಾದ ಕಾಶಿನಾಥ್ ನಾಯ್ಕ್ ಅವರಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ೧೦ 10 ಲಕ್ಷ ರೂಪಾಯಿ ನಗದು ಬಹುಮಾನವನ್ನು ಘೋಷಿಸಿದ್ರು.
ಇದರ ಜೊತೆಗೆ ಟೋಕಿಯೋ ಓಲಂಪಿಕ್ ಅಲ್ಲಿ ಅಮೋಘ ಸಾಧನೆಗೈದ ಭಾರತದ ಏಳು ಕ್ರೀಡಾಪಟುಗಳನ್ನು ರಾಜ್ಯ ಸರ್ಕಾರದ ವತಿಯಿಂದ ಸನ್ಮಾನಿಸಲಾಗುವುದು. ಇನ್ನೂ ಈಗಾಗಲೇ ಮುಖ್ಯಮಂತ್ರಿ ಜೊತೆಗೆ ಚರ್ಚೆ ನಡೆಸಿರುವ ಡಾ. ನಾರಾಯಣಗೌಡ ಅವರು, ಎಲ್ಲ ಕ್ರೀಡಾಪಟುಗಳನ್ನು ಆಹ್ವಾನಿಸಿ ಗೌರವಿಸಲು ತೀರ್ಮಾನಿಸಿದ್ದಾರೆ. ಜೊತೆಗೆ ಇದೇ ಸಂದರ್ಭದಲ್ಲಿ ತರಬೇತುದಾರ ಕಾಶಿನಾಥ್ ಅವರನ್ನು ಸನ್ಮಾನಿಸಲಾಗುವುದು ಎಂದು ಹೇಳಿದ್ದಾರೆ.