ಕೂಗು ನಿಮ್ಮದು ಧ್ವನಿ ನಮ್ಮದು

ಕತ್ತು ನೋವು ನೀಮ್ಮನ್ನು ಕಾಡುತ್ತಿದೆಯೇ? ಹಾಗೀದ್ರೆ ಹೀಗೊಮ್ಮೆ ಮಾಡಿ ನೋಡಿ

ಕತ್ತು ನೋವು: ಗೋಣನ್ನು ಒಂದೇ ಕಡೆಗೆ ತಿರುಗಿಸಿ ಕೂಡುವುದರಿಂದ, ಒಂದೇ ಮಗ್ಗುಲಿನಲ್ಲಿ ಮಲಗುವುದರಿಂದ, ಎತ್ತರದ ತಲೆದಿಂಬನ್ನಿಟ್ಟುಕೊಂಡು ಮಲಗುವುದರಿಂದ, ಆಕಸ್ಮಿಕವಾಗಿ ಕತ್ತು ಉಳುಕುವುದರಿಂದ, ಕತ್ತಿನ ನರಗಳಲ್ಲಿ ಸೆಳೆತ ಉಂಟಾದ್ರೆ, ಇತ್ಯಾದಿ ಕಾರಣಗಳಿಂದ ಕತ್ತಿನಲ್ಲಿ ನೋವುಂಟಾಗುತ್ತದೆ.

ಕತ್ತು ಒಂದು ಕಡೆ ಸೆಟೆದುಕೊಳ್ಳುತ್ತದೆ. ಕತ್ತನ್ನು ತಿರುಗಿಸಲು ಹೆಚ್ಚು ತೊಂದರೆ ಪಡಬೇಕಾಗುತ್ತದೆ; ಕತ್ತು ತಿರುಗಿಸಿದಾಗ ಮುರಿದಂತೆ ಅನುಭವವಾಗುತ್ತದೆ. ಕತ್ತು ನೋವಿನಿಂದ ವ್ಯಕ್ತಿಗೆ ಯಾವುದೇ ಕೆಲಸ ಮಾಡಲಾಗದೆ ಕಸಿವಿಸಿಯನ್ನು ಅನುಭವಿಸುತ್ತಾನೆ. ಇಂಥ ಸಂದರ್ಭದಲ್ಲಿ ಈ ಕೆಳಗಿನ ಉಪಚಾರಗಳನ್ನು ಮಾಡಿ.

೧) ಮೆಂತ್ಯ ಬೀಜದ ನುಣ್ಣನೆಯ ಚೂರ್ಣವನ್ನು ಜೇನುತುಪ್ಪದಲ್ಲಿ ಬೆರಸಿ,ಬೆಳಗ್ಗೆ ಸಾಯಂಕಾಲ ಸೇವಿಸಿ.

೨) ಸಾಸಿವೆಯ ಎಣ್ಣೆಯಲ್ಲಿ ಶುಂಠಿ ಮತ್ತು ಜೇನುತುಪ್ಪ ಬೆರೆಸಿ,ಕತ್ತಿನ ಮೇಲೆ ನಿಧಾನವಾಗಿ ಮೇಲಿನಿಂದ ಕೆಳಕ್ಕೆ ಮರ್ದನ ಮಾಲಿಷ್ ಮಾಡಿ.

೩) ಜೇನುತುಪ್ಪದಲ್ಲಿ ಸಾಸಿವೆ ಮತ್ತು ಬೆಳ್ಳುಳ್ಳಿ ಎಣ್ಣೆಯನ್ನು ಚೆನ್ನಾಗಿ ಕಲಸಿ. ನಂತರ ಇದನ್ನು ಕತ್ತಿಗೆಲ್ಲ ಲೇಪಿಸಿಕೊಂಡು, ತುಸು ಹೊತ್ತು ಬಿಸಿಲಿನಲ್ಲಿ ಕುಳಿತುಕೊಳ್ಳಿ.

೪) ಔಡಲ ಎಲೆಗೆ ಜೇನುತುಪ್ಪವನ್ನು ಸೆವರಿ, ಅದನ್ನು ಬಿಸಿಮಾಡಿ ಹಿತವಾಗುವಂತೆ ಕತ್ತಿಗೆ ಕಟ್ಟು ಹಾಕಿಕೊಳ್ಳಿ.

೫) ಜಾಜೀಕಾಯಿಯ ನುಣ್ಣನೆಯ ಚೂರ್ಣದಲ್ಲಿ ಜೇನುತುಪ್ಪ ಬೆರೆಸಿ, ಕತ್ತಿಗೆ ಲೇಪಿಸಿ

೬) ಲಂವಂಗದ ಎಣ್ಣೆ, ಸಾಸಿವೆ ಎಣ್ಣೆಯಲ್ಲಿ ಜೇನುತುಪ್ಪ ಬೆರೆಸಿ, ಕತ್ತಿಗೆ ಲೇಪಿಸಿ ಮರ್ದನ ಮಾಡಿ; ನಂತರ ನಿಂಬೆರಸದ ನೀರು ಮತ್ತು ಜೇನುತುಪ್ಪವನ್ನು ಸೇವಿಸಿ.

error: Content is protected !!