ಬೆಳಗಾವಿ: ಜಿಲ್ಲೆಯ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದಲ್ಲಿ ಈಗ ಮಸಣ ಮೌನ ಆವರಿಸಿದೆ, ನಿನ್ನೆ ಅಷ್ಟೇ ಕೃಷ್ಣಾ ನದಿಯಲ್ಲಿ ಬಟ್ಟೆ ತೊಳೆಯಲು ಹೋದ ಸಮಯದಲ್ಲಿ ಕೃಷ್ಣಾದಲ್ಲಿ ನದಿಯಲ್ಲಿ ನೀರು ಪಾಲ ರಾಗಿರುವ ಒಂದೇ ಕುಟುಂಬದ ನಾಲ್ವರ ಸಹೋದರರ, ಶೋಧ ಕಾರ್ಯಾಚರಣೆ ಇನ್ನು ಮುಂದುವರಿದಿದೆ,
ಒಂದೇ ಕುಟುಂಬದ ನಾಲ್ಕು ಜನ ಕೃಷ್ಣಾನದಿಗೆ ಆಹುತಿಯಾಗಿರುವುದರಿಂದ ಗ್ರಾಮದಲ್ಲಿ ಮೌನ ಆವರಿಸಿಕೊಂಡಿದೆ. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳೀಯ ಮೀನುಗಾರರ ಒಂದು ಬೋಟ್ ಮತ್ತು ಎನ್ ಡಿ ಆರ ಎಪ್ ನ ಎರಡೂ ಬೋಟ್ ಬಳಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ, ಅಥಣಿ ತಹಶಿಲ್ದಾರ ದುಂಡಪ್ಪ ಕೋಮಾರ, ಡಿವೈಎಸ್ ಪಿ ಗಿರೀಶ್ ಮತ್ತು ಎನ್ ಡಿ ಆರ್ ಎಪ್ ತಂಡದ ಲೀಮಾ ಟೆನ್ಸು ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ.