ಕೂಗು ನಿಮ್ಮದು ಧ್ವನಿ ನಮ್ಮದು

ಹಚ್ಚ ಹಸುರಿನ ಕಾನನದಲ್ಲಿ ಗರಿಬಿಚ್ಚಿ ಕುಣಿದ ನಾಟ್ಯ ಮಯೂರಿ: ವಿಡಿಯೋ ನೀವು ಒಮ್ಮೆ ನೋಡಿ

ಕಲಬುರಗಿ: ಬಿಸಿಲೂರು ಕಲಬುರಗಿಯಲ್ಲಿ ತಣ್ಣನೆಯ ವಾತಾವರಣ ಹಚ್ಚ ಹಸಿರಿನ ದೃಶ್ಯಕಾವ್ಯ ಬಲು ಅಪರೂಪ. ಅಂತಹ ಅಪರೂಪದ ಸೊಬಗು ನೋಡಲು ಸಿಗುವದು ಮಳೆಗಾಲದಲ್ಲಿ ಮಾತ್ರ. ಅದೂ ಕೇವಲ ಚಿಂಚೋಳಿಯ ಕಾನನದಲ್ಲಿ. ಹೌದು.. ಹಚ್ಚ ಹಸುರಿನ ಚಿಂಚೋಳಿಯ ವನ್ಯಧಾಮದಲ್ಲಿ ನವಿಲೊಂದು ಗರಿ ಬಿಚ್ಚಿ ನಾಟ್ಯವಾಡಿದೆ. ಚಂದ್ರಂಪಳ್ಳಿ ಜಲಾಶಯದ ಬಳಿ ಈ ಪಂಚರಂಗಿ ನವಿಲು ನಾಟ್ಯವಾಡೋ ಸೀನ್  ಅರಣ್ಯಾಧಿಕಾರಿಯ ಮೊಬೈಲಲ್ಲಿ ಸೆರೆಯಾಗಿದೆ. ಚಿಂಚೋಳಿ ಉಪವಲಯ ಅರಣ್ಯಾಧಿಕಾರಿ ಸಿದ್ಧಾರೂಢ ಹೊಕ್ಕುಂಡಿ ಅವರು ಎಂದಿನಂತೆ ಕಾಡಿನಲ್ಲಿ ಹೋಗೋ ವೇಳೆ ನಾಟ್ಯ ಮಯೂರಿ ಗರಿಬಿಚ್ಚಿ ಕುಣಿದು ನೋಡಿ ನನ್ನ ವೈಯಾರವ ಅಂತ ನಾಚಿಕೊಂಡಿದೆ. ಹೇಗಿತ್ತು ಮಯೂರಿಯ ನಾಟ್ಯ ನೀವು ಒಮ್ಮೆ ನೋಡಿ.

error: Content is protected !!