ನವದೆಹಲಿ: ನರೇಂದ್ರ ಮೋದಿ ನೀಡಲಾದ ಉಡುಗೊರೆಗಳ ಇ ಹರಾಜಿನಲ್ಲಿ, ಟೋಕಿಯೋ ಒಲಿಂಪಿಕ್ಸ್ನಲ್ಲಿ ಗೋಲ್ಡ್ ಮೆಡಲ್ ವಿನ್ನರ್ ನೀರಜ್ ಚೋಪ್ರಾ ಜಾವೆಲಿನ್ ಅತ್ಯಂತ ಅಧಿಕ ಬೆಲೆಗೆ ಮಾರಾಟಗೊಂಡಿದೆ. ಇ ಹರಾಜು ಗುರುವಾರ ಮುಕ್ತಾಯಗೊಂಡಿದೆ. ಒಲಿಂಪಿಕ್ಸ್ನಲ್ಲಿ ನೀರಜ್ ಬಳಸಿದ್ದ ಜಾವೆಲಿನ್ ಬರೋಬ್ಬರಿ ಒಂದೂವರೆ ಕೋಟಿ ಹಾಗೂ ಭವಾನಿ ದೇವಿ ಆಟೋಗ್ರಾಫ್ವುಳ್ಳ ಫೆನ್ಸಿಂಗ್ ಕತ್ತಿ ೧ ಕಾಲು ಕೋಟಿಗೆ ಹರಾಜುಗೊಂಡಿದೆ. ನರೇಂದ್ರ ಮೋದಿ ಅವರಿಗೆ ಗಣ್ಯರು ನೀಡಿರುವ ಕಾಣಿಕೆಗಳನ್ನು ಇ-ಹರಾಜಿನಲ್ಲಿ ಇರಿಸಲಾಗಿತ್ತು.
ನೀರಜ್ ಚೋಪ್ರಾ ತಮ್ಮ ಜಾವೆಲಿನನ್ನು ನರೇಂದ್ರ ಮೋದಿ ಅವರಿಗೆ ಕಾಣಿಕೆಯಾಗಿ ನೀಡಿದ್ರು. ಇದೇ ವೇಳೆ ಬ್ಯಾಡ್ಮಿಂಟನ್ ತಾರೆ P.V.ಸಿಂಧು, ಮೊದಲ ಬಾರಿಗೆ ಫೆನ್ಸಿಂಗ್ನಲ್ಲಿ ಭಾರತ ಪ್ರತಿನಿಧಿಸಿದ್ದ ಭವಾನಿ ದೇವಿ ಸೇರಿದಂತೆ ಕೆಲವು ಕ್ರೀಡಾಪಟುಗಳು ಪ್ರಧಾನಿಗಳನ್ನು ಭೇಟಿಯಾಗಿದ್ರು. ಎಲ್ಲರೂ ಪ್ರಧಾನಿಗಳಿಗೆ ವಿಶೇಷ ಉಡುಗೊರೆಗಳನ್ನು ನೀಡಿದ್ರು. ನೀರಜ್ ಚೋಪ್ರಾ ಅವರ ಭರ್ಜಿಗೆ ಆನ್ಲೈನ್ನಲ್ಲಿ ಮೂಲ ಬೆಲೆಯಾಗಿ ೮೦ ಸಾವಿರ ರೂಪಾಯಿ ನಿಗದಿ ಮಾಡಲಾಗಿತ್ತು. ಭರ್ಜಿಗೆ ಬೇಡಿಕೆ ಹೆಚ್ಚಾದ ಹಿನ್ನೆಲೆ ಕೊನೆಗೆ ೧.೫೦ ಕೋಟಿಗೆ ಬಿಕರಿಯಾಗಿದೆ.
ಭವಾನಿಯವರ ಫೆನ್ಸಿಂಗ್ ಕೂಡ ೧.೨೫ ಕೋಟಿಗೆ ಬಿಕರಿಗೊಂಡಿದೆ. ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದ P.V.ಸಿಂಧು ಅವರ ರಾಕೆಟ್ ಬೆಲೆ ೮೦ ಲಕ್ಷ ರೂಪಾಯಿ ಅಂತಿಮಗೊಂಡಿತು. ಟೋಕಿಯೋ ಪ್ಯಾರಾಲಿಂಪಿಕ್ಸ್ನಲ್ಲಿ ಭಾಗಿಯಾಗಿದ್ದ ಆಟಗಾರರ ಸಹಿಯುಳ್ಳ ಡ್ರೆಸ್ ೧ ಕೋಟಿ ರೂಪಾಯಿಗೆ ಹರಾಜುಗೊಂಡಿದೆ. ಪ್ಯಾರಾಲಿಂಪಿಕ್ಸ್ನಲ್ಲಿ ಜಾವೆಲಿನ್ ವಿಭಾಗದಲ್ಲಿ ಚಿನ್ನ ಗೆದ್ದ ಸುಮಿತ್ ಅಂತಿಲ್ ಅವರ ಭರ್ಜಿ ಸಹ ೧.೦೦೨ ಕೋಟಿ ರೂಪಾಯಿ ಹಾಗೂ ಬಾಕ್ಸಿಂಗ್ನಲ್ಲಿ ಕಂಚು ಗೆದ್ದ ಲವ್ಲೀನಾ ಅವರ ಗ್ಲೌಸ್ ೯೧ ಲಕ್ಷ ರೂಪಾಯಿಗೆ ಮಾರಾಟಗೊಂಡಿದೆ.
ಮಿನಿಸ್ಟರಿ ಆಫ್ ಕಲ್ಚರ್ ಪ್ರಧಾನಿಗಳಿಗೆ ಸಿಕ್ಕಂತಹ ಎಲ್ಲ ಕಾಣಿಕೆಗಳನ್ನು ಆನ್ಲೈನ್ನಲ್ಲಿ ಹರಾಜಿಗೆ ಇಟ್ಟಿತ್ತು. ಸೆಪ್ಟೆಂಬರ್ ೧೭ ರಿಂದ ಅಕ್ಟೋಬರ್ ೭ರವವರೆಗೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ೧,೩೦೦ ವಸ್ತುಗಳನ್ನು ಇರಿಸಲಾಗಿತ್ತು. ಇಲ್ಲಿ ಬಂದಂತಹ ಎಲ್ಲ ಹಣವನ್ನು ‘ನಮಾಮಿ ಗಂಗಾ’ ಯೋಜನೆಗೆ ವಿನಿಯೋಗಿಸಲಾಗುತ್ತದೆ. ಇದಕ್ಕೂ ಮುಂಚೆ ೨೦೧೯ ರಲ್ಲಿ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ ಸಹ ತನ್ನಲ್ಲಿರುವ ಕೆಲವು ವಸ್ತುಗಳನ್ನು ಆನ್ಲೈನ್ ಹರಾಜಿನಲ್ಲಿರಿಸಿತ್ತು. ಹರಾಜಿನಲ್ಲಿ ಬಂದ ಹಣವನ್ನು ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ ಗಂಗಾ ನದಿ ಪುನರುಜ್ಜೀವನ ಯೋಜನೆಯಾಗಿರುವ ನಮಾಮಿ ಗಂಗೆ ಮಿಷನ್ಗೆ ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ನರೇಂದ್ರ ಮೋದಿ ಅವರು ಘೋಷಿಸಿದ್ರು.