ಕೂಗು ನಿಮ್ಮದು ಧ್ವನಿ ನಮ್ಮದು

ದಾವಣಗೆರೆಯಲ್ಲಿ ಒಂದೇ ಕ್ಷೇತ್ರಕ್ಕೆ ದಂಪತಿ ನಾಮಪತ್ರ ಸಲ್ಲಿಕೆ

ದಾವಣಗೆರೆ: ಚುನಾವಣೆ ಸಮಯದಲ್ಲಿ ಅನೇಕ ಅಚ್ಚರಿ ಸಂಗತಿಗಳು ನಡೆಯುತ್ತಿರುತ್ತವೆ. ಅದೇ ರೀತಿಯಾಗಿ ದಾವಣಗೆರೆ ಜಿಲ್ಲೆಯ ಜಗಳೂರು ಎಸ್ಟಿ ಮೀಸಲು‌ ಕ್ಷೇತ್ರದಲ್ಲಿ ದಂಪತಿ ನಾಮಪತ್ರ ಸಲ್ಲಿಸಿದ್ದಾರೆ. ಹೌದು ಜಗಳೂರಿನ ಎಸ್ಟಿ ಮೀಸಲು‌ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಹಾಲಿ ಶಾಸಕ ಎಸ್ ವಿ ರಾಮಚಂದ್ರ ಮತ್ತು ಪತ್ನಿ ಇಂದಿರಾ ಎಸ್ ಆರ್ ನಾಮಪತ್ರ ಸಲ್ಲಿಸಿದ್ದಾರೆ. ಮತ್ತು ಈ ರೀತಿಯಾಗಿ ನಾಮಪತ್ರ ಸಲ್ಲಿಸುತ್ತಿರುವುದು ಇದೇ ಮೊದಲ ಬಾರಿಗೆ ಏನಲ್ಲ, ಕಳೆದ ನಾಲ್ಕು ಚುನಾವಣೆಯಲ್ಲೂ ಕೂಡ ದಂಪತಿ ನಾಮಪತ್ರ ಸಲ್ಲಿಸಿದ್ದರು. ಕೊನೆಯ ಕ್ಷಣದಲ್ಲಿ ತಮ್ಮ ನಾಮಪತ್ರದಲ್ಲಿ ಎನಾದರೂ ಗೊಂದಲವಾದರೇ ಪತ್ನಿಯಾದರೂ ಕಣದಲ್ಲಿ ಇರುತ್ತಾರೆ ಎಂಬ ಉದ್ದೇಶದ ಶಾಸಕ ರಾಮಚಂದ್ರ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಶಾಸಕ ರಾಮಚಂದ್ರ ಅವರು ನಾಲ್ಕು ಚುನಾವಣೆಯಲ್ಲಿ 3ರಲ್ಲಿ ಗೆದ್ದಿದ್ದು,‌ ಈಗ 5ನೇ ಸಲ ‌ಕಣದಲ್ಲಿದ್ದಾರೆ.

ಪರಸ್ಪರ ಶಕ್ತಿ‌ ಪ್ರದರ್ಶನಕ್ಕೆ ಮುಂದಾದ ಅಕ್ಕ-ತಂಗಿ
ವಿಜಯನಗರ: ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಅಕ್ಕ-ತಂಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಮೂಲಕ ಪರಸ್ಪರ ಶಕ್ತಿ‌ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಮಾಜಿ ಡಿಸಿಎಂ ದಿವಂಗತ ಎಂಪಿ‌ ಪ್ರಕಾಶ ಪುತ್ರಿಯರಾದ ಎಂಪಿ‌ ಲತಾ ಮಲ್ಲಿಕಾರ್ಜುನ ಹಾಗೂ ಎಂಪಿ ವೀಣಾ ಮಹಾಂತೇಶ ಚುನಾವಣಾ ಅಖಾಡಕ್ಕೆ ದುಮುಖಿದ್ದಾರೆ.

ಎಂಪಿ‌ ಲತಾ ಮಲ್ಲಿಕಾರ್ಜುನ ಹಾಗೂ ಎಂಪಿ ವೀಣಾ ಮಹಾಂತೇಶ ಅವರು ವಿಜಯನಗರ ಜಿಲ್ಲೆಯ‌ ಹರಪನಹಳ್ಳಿ ‌ವಿಧಾನ ಸಭಾ ಕ್ಷೇತ್ರದ‌ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಆದರೆ ಇವರಿಗೆ ಟಿಕೆಟ್ ಕೈ ತಪ್ಪಿದ್ದು, ಎನ್ ಕೊಟ್ರೇಶ್ ಎಂಬುವರಿಗೆ ಟಿಕೆಟ್ ನೀಡಲಾಗಿದೆ. ಈ ಹಿನ್ನೆಲೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆಗೆ ಇಳಿದಿದ್ದು, ಮೊದಲು ಎಂಪಿ ‌‌‌ಪ್ರಕಾಶ ಕಿರಿಯ‌ ಮಗಳು ಎಂಪಿ‌. ವೀಣಾ ನಂತರ ಹಿರಿಯ‌ ಮಗಳು ಎಂಪಿ‌ ಲತಾ ಮಲ್ಲಿಕಾರ್ಜುನ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.

error: Content is protected !!