ಕೂಗು ನಿಮ್ಮದು ಧ್ವನಿ ನಮ್ಮದು

ಮಾತಿನ ಚಕಮಕಿ ನಿಲ್ಲಿಸಿ: ಮೈಸೂರಿನ ಜನ ಪ್ರತಿನಿಧಿಗಳಿಗೆ ಕಟೀಲ್‌ ಎಚ್ಚರಿಕೆ

ಬೆಂಗಳೂರು: ಮೈಸೂರಿನ ಇಬ್ಬರು ಶಾಸಕರು ಮತ್ತು ಸಂಸದರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಕರೆ ಮಾಡಿ ಮಾತಿನ ವಾಕ್ಸಮರ ನಿಲ್ಲಿಸುವಂತೆ ತಾಕೀತು ಮಾಡಿದ್ದಾರೆ. ಹಾದಿ ಬೀದಿ ರಂಪಾಟದಿಂದ ಪಕ್ಷಕ್ಕೆ ಮುಜುಗರವಾಗುತ್ತಿರುವ ಹಿನ್ನೆಲೆಯಲ್ಲಿ ರಾಮದಾಸ್‌, ಎಲ್‌.ನಾಗೇಂದ್ರ ಹಾಗೂ ಸಂಸದ ಪ್ರತಾಪ್‌ ಸಿಂಹಾಗೆ ಖುದ್ದಾಗಿ ನಳಿನ್ ಕುಮಾರ್ ಕಟೀಲ್‌ ಕರೆ ಮಾಡಿ ವಿವರಣೆ ಕೇಳಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಗ್ಯಾಸ್‌ ಪೈಪ್‌ಲೈನ್‌ ಯೋಜನೆ ಕೇಂದ್ರ ಸರ್ಕಾರದ್ದು. ನಾಯಕರಾದ ನೀವೇ ಸುದ್ದಿಗಾರರ ಮುಂದೆ ಹೇಳಿಕೆ ನೀಡುವುದು ಪಕ್ಷದ ನಿಯಮ ಉಲ್ಲಂಘನೆ ಆಗುತ್ತದೆ. ಕೂಡಲೇ ಮಾತಿನ ಸಮರ ನಿಲ್ಲಿಸಬೇಕು. ಇಲ್ಲದಿದ್ದರೆ ಹೈಕಮಾಂಡ್‌ಗೆ ವರದಿ ಸಲ್ಲಿಸುವುದಾಗಿ ಖಡಕ್ ಎಚ್ಚರಿಕೆಯನ್ನು ನಳಿನ್ ಕುಮಾರ್ ಕಟೀಲ್ ನೀಡಿದ್ರು.

error: Content is protected !!