ಉಡುಪಿ: ನಾನು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ, ಇಲ್ಲಿಯವರೆಗೂ ನನಗೆ ಸಿಎಂ ಬದಲಾವಣೆಯ ಕುರಿತು ಹೈಕಮಾಂಡ ಯಿಂದ ಯಾವುದೇ ಮಾಹಿತಿಯು ನನಗೆ ಬಂದಿಲ್ಲ. ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ ಹೇಳಿದ್ದಾರೆ. ಇನ್ನೂ ಉಡುಪಿಯಲ್ಲಿ ಮಾತನಾಡಿದ ಕಟೀಲ ಅವರು, ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ನಾನು ಸಹ ಸುದ್ದಿಗಾರರಿಂದ ತಿಳಿದುಕೊಂಡಿದ್ದೇನೆ. ಜೊತೆಗೆ ಈ ವಿಷಯದ ಬಗ್ಗೆ ನಾನು ಹೇಳುವುದು ಏನೂ ಇಲ್ಲ ಎಂದಿದ್ದಾರೆ. ನಾನು ಕೆಸರು ಗದ್ದೆಯಲ್ಲಿ ಟ್ರ್ಯಾಕ್ಟರ್ ಓಡಿಸಿದ್ದೇನೆ. ಈಗ ರಾಜ್ಯದ ಟ್ರ್ಯಾಕ್ಟರ್ ಯಡಿಯೂರಪ್ಪನವರು ಓಡಿಸುತ್ತಿದ್ದಾರೆ ಎಂದ್ರು.
ಇನ್ನೂ ಈ ಹಿಂದೆಯೂ ಸಹ ಸಿದ್ದರಾಮಯ್ಯ ಅಹಿಂದ ಹೋರಾಟ ಮಾಡಿದವರು, ಅದರಿಂದಲೇ ಸಿಎಂ ಆದ್ರು. ಇನ್ನೂ ಸಿಎಂ ಆದ ಬಳಿಕ ಅಹಿಂದ ಹೋರಾಟ ಮರೆತು ಬಿಟ್ರು. ಈಗ ತಾಕತ್ತಿದ್ರೆ ದಲಿತರನ್ನು ಮುಖ್ಯಮಂತ್ರಿಯಾಗಿ ಮಾಡಿ ಎನ್ನುವವರು, ತಾವು ಸಿಎಂ ಆದಾಗ ದಲಿತರಿಗೆ ಏನು ಮಾಡಿದ್ದಾರೆ. ಎಂದು ನಳಿನ್ಕುಮಾರ ಕಟೀಲ ಟಾಂಗ್ ನೀಡಿದ್ದಾರೆ.
ಈ ಹಿಂದೆಯೇ ಸಿದ್ದರಾಮಯ್ಯ ಸಿಎಂ ಆಗಿರುವಾಗ ಹಿಂದುಳಿದ ವರ್ಗಕ್ಕೆ ಏನೂ ಮಾಡಿಲ್ಲ. ಜೊತೆಗೆ ದಲಿತ ಮುಖ್ಯಮಂತ್ರಿ ಎಂಬ ಚರ್ಚೆಯನ್ನೇ ಮುಚ್ಚಿಹಾಕಿದ್ರು. ಕಾಂಗ್ರೆಸ್ನಲ್ಲಿ ರಾತ್ರಿ, ಹಗಲು ಕೆಲಸ ಮಾಡಿದ ಜಿ. ಪರಮೇಶ್ವರ್ ಅವರನ್ನು ಮೂಲೆಗುಂಪು ಮಾಡಿದ್ರು. ಜೊತೆಗೆ ಪರಮೇಶ್ವರ್ ಮತ್ತು ಖರ್ಗೆಯವರನ್ನು ಸೋಲಿಸಿದ ಇತಿಹಾಸವೇ ಇದೆ. ಹಾಗಾಗಿ ಈಗ ತಾಕತ್ ಇದ್ರೆ ದಲಿತ ಮುಖ್ಯಮಂತ್ರಿ ಮಾಡಿ ಎನ್ನುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿದ್ರು.
ಇನ್ನೂ ವಾಜಪೇಯಿ ಸರ್ಕಾರ ಮುಸ್ಲಿಂ ಬಂಧುವನ್ನು ರಾಷ್ಟ್ರಪತಿ ಮಾಡಿದೆ. ಮೋದಿಯವರು ದಲಿತ ರಾಷ್ಟ್ರಪತಿಯನ್ನು ನಮ್ಮ ದೇಶಕ್ಕೆ ಕೊಟ್ಟಿದ್ದಾರೆ. ಸಿಎಂ ಯಡಿಯೂರಪ್ಪ, ಗೋವಿಂದ ಕಾರಜೋಳರನ್ನು ಉಪಮುಖ್ಯಮಂತ್ರಿ ಮಾಡಿದ್ದಾರೆ. ಕೇಂದ್ರದಲ್ಲಿ ನಾರಾಯಣಸ್ವಾಮಿ ಸಚಿವರಾಗಿದ್ದಾರೆ. ಜೊತೆಗೆ ಕೇಂದ್ರ ಸಚಿವ ಸಂಪುಟದಲ್ಲಿ ಶೇಕಡಾ ೩೦ ರಷ್ಟು SC ST ಸಚಿವರಿದ್ದಾರೆ. ಕಾಂಗ್ರೆಸ್ ದಲಿತರಿಗೆ ಏನು ಮಾಡಿದೆ ಎಂದು ಕಟೀಲ ಪ್ರಶ್ನೆ ಮಾಡಿದ್ರು.
ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಇರುವಾಗ ಸಿಎಂ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಕಟೀಲ್, ಎಲ್ಲಾ ಸಚಿವರು ತಮ್ಮ ತಮ್ಮ ಕ್ಷೇತ್ರದಲ್ಲಿ ಇರುವಂತೆ ಮುಖ್ಯಮಂತ್ರಿ ಸೂಚನೆಯನ್ನು ನೀಡಿದ್ದಾರೆ. ಇನ್ನೂ ಸಿಎಂ ಅವರು ವೈಮಾನಿಕ ಸಮೀಕ್ಷೆ ನಡೆಸುತ್ತಿದ್ದಾರೆ. ಅದಲ್ಲದೇ ರಾಜ್ಯಾದ್ಯಂತ ಪ್ರವಾಸ ಮಾಡಿ ಜನರಿಗೆ ಸಾಂತ್ವನವನ್ನು ಹೇಳುತ್ತಿದ್ದಾರೆ ಎಂದಿದ್ದಾರೆ.